ಪಾವಗಡ :
ಹಿಂದೂಪುರ ಆಸ್ಪತ್ರೆಯ ವೈದ್ಯರಿಗೆ ಕೊರೊನ ವೈರಸ್ ಸೊಂಕಿರುವ ಬಗ್ಗೆ ದೃಡಪಟ್ಟ ಕೂಡಲೇ ತಾಲೂಕಿನ ದೊಮ್ಮತಮರಿ ಗ್ರಾಮದವರು ಇದೇ ಆಸ್ಪತ್ರೆಗೆ ತೆರೆಳಿದ ಬಗ್ಗೆ ಅಲ್ಲಿಂದ ಮಾಹಿತಿ ತಿಳಿದ ಕೂಡಲೇ ಇಬ್ಬರು ಪಟ್ಟಣದ ಕೊವಿಡ್-19 ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ತಾಲೂಕು ಆರೋಗ್ಯಾಧಿಕಾರಿ ತಿರುಪತಯ್ಯ ಸಂಸದರಾದ ನಾರಾಯಣ ಸ್ವಾಮಿರವರಿಗೆ ತಿಳಿಸಿದರು.
ಮಂಗಳವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕೊವಿಡ್19 ರ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಆರೋಗ್ಯ ಇಲಾಖೆ ವತಿಯಿಂದ ದೊಮ್ಮತಮರಿ ಗ್ರಾಮದವರ ಬಗ್ಗೆ ಮಾಹಿತಿ ಪಡೆದು ಗ್ರಾಮದಲ್ಲಿ ಇವರ ಒಡಾಟದ ಬಗ್ಗೆ ಹಾಗೂ ಇವರನ್ನು ಸಂಪರ್ಕಿಸಿದವರ ಬಗ್ಗೆ ತಕ್ಷಣವೇ ಮಾಹಿತಿ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಂಸದ ನಾರಾಯಣಸ್ವಾಮಿ ಮಾತನಾಡಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಭಾರದು, ಪಡಿತರ ಅಕ್ಕಿ ಸಮರ್ಪಕವಾಗಿ ವಿತರಣಿ ಮಾಡಿ, ಕೇಂದ್ರ ಸರ್ಕಾರದ ಆದೇಶದಂತೆ ಯಾರು ಇಂದು ಹಸಿವಿನಿಂದ ಬಳಲಕೂಡದು,ಹೊರ ರಾಜ್ಯಗಳಿಂದ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ, ಹಣ್ಣು ತರಕಾರಿ ಮಾರುಕಟ್ಟೆಗೆ ಹೊಗಲು ಆಗತ್ಯ ಕ್ರಮವಹಿಸಿ ಎಂದು ತಹಶೀಲ್ದರ್ ವರದರಾಜ್ ಹಾಗೂ ತೋಟಗಾರಿಕೆ ಸಹಾಯ ನಿರ್ದೇಶಕ ಸುಧಾಕರ್ ರವರಿಗೆ ತಿಳಿಸಿದರು.
ಶಿಶು ಅಭಿವೃದ್ದಿ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಯಾರೇ ಬೇರೆ ಕಡೆಗಳಿಂದ ಬಂದರು ತಕ್ಷಣ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ,ಪಟ್ಟಣದ ಸರ್ಕಾರಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಸ್ಥಳಾಂತರ ಬಗ್ಗೆ ವೈದ್ಯರಾದ ಕಿರಣ್‍ರವರಿಂದ ಮಾಹಿತಿ ಪಡೆದು, ಜನ್‍ಧನ್ ಖಾತೆಗಳು ಜನತೆ ಬ್ಯಾಂಕ್‍ನಲ್ಲಿ ವ್ಯವಹಾರ ಮಾಡದ ಕಾರಣ ಲಾಕ್ ಆಗಿದ್ದು,ಮತ್ತೆ ಆಧಾರ್ ಲಿಂಕ್ ಮಾಡಿಸುವ ಬಗ್ಗೆ ಪ್ರಚಾರ ನೀಡಬೇಕು ಹಾಗೂ ಶಾಖೆಗಳ ಮುಂದೆ ಬೊರ್ಡ್ ಅಳವಡಿಸಿ ಜಾಗೃತಿ ಮೂಡಿಸಿ ಎಂದರು.
ಯಾವುದೇ ಸಭೆಗಳಿಗೂ ಬಾರದ ಕಾರ್ಮಿಕ ಇಲಾಖೆಯ ಆಧಿಕಾರಿಯನ್ನು ಆಮಾನತ್ತು ಮಾಡಿ ,ಕೊವಿಡ್ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಆಗತ್ಯ ಸೌಲಭ್ಯಗಳನ್ನು ಒದಗಿಸದೆ ಇಂತಹ ಬೇಜವಬ್ದಾರಿ ಅಧಿಕಾರಿಗಳನ್ನು ಸಹಿಸಲು ಸಾಧ್ತವಿಲ್ಲ,ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಕಾರ್ಮಿಕರಿಗೆ ಸೀಗುವುದಾದರು ಹೇಗೆ ಇವರು ಕೂಡಲೇ ಆಮಾನತ್ತು ಮಾಡಿ ಎಂದು ಕೆಂಡಮಂಡಲರಾದರು.
ಸಭೆಯಲ್ಲಿ ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ಕೊವಿಡ್ ಹಿನ್ನೆಲೆಯಲ್ಲಿ ಎಲ್ಲಾ ಆಧಿಕಾರಿ ವರ್ಗ ತಮ್ಮ ಕೇಲಸಗಳಲ್ಲಿ ಲೋಪಕಾಣದಂತೆ ಕಾರ್ಯ ನಿರ್ವಹಿಸಿ ಲೋಪ ಕಂಡು ಬಂದಲ್ಲಿ ಕ್ರಮ ತಪ್ಪಿದಲ್ಲ,ಪಡಿತರ ಚೀಟಿ ಇಲ್ಲದವರಿಗೂ ಅಕ್ಕಿ ವಿತರಣಿ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯಿಂದ ಜನತೆ ಪಡಿತರ ಕೇಂದ್ರಗಳ ಮುಂದೆ ಕೂಗಾಡುವಂತಾಗಿದ್ದು,ಜನತೆಯಗೊಂದಲವನ್ನು ನಿವಾರಿಸಿ ಗ್ರಾ.ಪಂ ಪಿಡಿಒಗಳು ಗ್ರಾ.ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರಬೇಕು ಉದ್ದೇಶಿತ ಲಾಕ್‍ಡೌನ್‍ನಿಂದ ತಮಗೆ ನೀಡಿದ ಜವಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ಬಾರಿ ಬೆಲೆತೆತ್ತಬೇಕಾಗುತ್ತದೆ ಎಂದು ಶಾಸಕ ವೆಂಕಟರಮಣಪ್ಪ ಆಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಪಂ ಅದ್ಯಕ್ಷರಾದ ಸೊಗುಡು ವೆಂಕಟೇಶ್, ಉಪಾಧ್ಯಕ್ಷರಾದ ನಾಗರಾಜು, ಇ,ಒ ನರಸಿಂಹ್ಮಮೂರ್ತಿ, ತಹಶೀಲ್ದರ್ ವರದರಾಜು,ಸಿ.ಪಿ.ಐ ನಾಗರಾಜು,ಪಿ.ಎಸ್.ಐ ನಾಗರಾಜು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








