ಬೆಂಗಳೂರು
ಜಾತಿ ಮತ್ತು ಸಮಾಜದ ಮೇಲೆ ರಾಜಕಾರಣ ನಡೆಯುತ್ತಿದೆಯಾದರೂ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸ್ಮಿತೆ, ಇತಿಹಾಸ ಬೇರೆ ಪಕ್ಷಗಳಿಗೆ ಇಲ್ಲ.ಇದನ್ನು ಅರಿತು ನಮ್ಮ ಕಾರ್ಯಕರ್ತರು ತಳಖಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ,ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 35ನೇ ಪುಣ್ಯ ಸ್ಮರಣೆ ಹಾಗೂ ದಿ. ಸರ್ದಾರ್ ಪಟೇಲ್ ಅವರ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜಾತಿಗಳು ಅಧಿಕಾರಕ್ಕೆ ಬರಲಿವೆ ನಮ್ಮದು ಸಮ ಸಮಾಜದ ಗುರಿಯಾಗಿದೆ ಎಂದು ತಿಳಿಸಿದರು.
ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮೀಸಲಿಲ್ಲ. ಕೇವಲ ಜಿಲ್ಲಾ ಕೇಂದ್ರ ಗಳಿಗೆ ಮಾತ್ರ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ನಾನು ದ್ವೇಷದ ರಾಜಕಾರಣ ಮಾಡುತ್ತೇನೆ ಎನ್ನುವ ಸಂದೇಶ ಅವರು ರವಾನೆ ಮಾಡಿದ್ದಾರೆ.ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ ಎಂದರು.
ಕನಕಪುರಕ್ಕೆ ವೈದ್ಯಕೀಯ ಕಾಲೇಜು ನಮ್ಮ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿದೆ ಚಿಕ್ಕಬಳ್ಳಾಪುರಕ್ಕೆ ಕಾಲೇಜು ಅನರ್ಹ ಶಾಸಕ ಸುಧಾಕರ ಅವರದ್ದು ತಪ್ಪು ಎಂದು ಹೇಳುವುದಿಲ್ಲ ಎಂದ ಅವರು, ಈ ಸಂಬಂಧ ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಪಕ್ಷ ಅಧಿಕಾರಕ್ಕೆ ಬರಲ್ಲ ಎನ್ನುವ ಚಿಂತೆಯೇ ಇಲ್ಲ.ಏಕೆಂದರೆ, ಎಲ್ಲ ವರ್ಗದವರನ್ನುಸಮಾನವಾಗಿ ತೆಗೆದುಕೊಂಡು ಹೋದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ.ಇವರೇ ಸಾಕು ಇವರು ಬೇಡ ಎಂದರೆ ಅರ್ಥವಿಲ್ಲ ಜೈಲಿನಲ್ಲಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣದ ಬಗ್ಗೆ ವಿವಿಧ ಬಗೆ ಚರ್ಚೆ ಆಗುತಿತ್ತು. ಸಮ್ಮಿಶ್ರ ಸರ್ಕಾರ ರಚನೆ, ಕಾಂಗ್ರೆಸ್ ಬರೀ 7 -8 ಸ್ಥಾನ ಬರುತ್ತೆ ಎನ್ನುತ್ತಿದ್ದರು. ಆದರೆ ಮತದಾರನ ನಿರ್ಧಾರವೇ ಬೇರೆ ಆಗಿತ್ತು ಎಂದು ನುಡಿದರು.
ನಾನು ಆಗ ವಿದ್ಯಾರ್ಥಿಯಾಗಿದ್ದೇ, ಯೂನಿಯನ್ ನಲ್ಲೂ ಇದ್ದೆ. ಆಗ ಚಿತ್ರಮಂದಿರ ನಿರ್ಮಾಣ ಮಾಡಬೇಕು ಎಂದು ಅರ್ಜಿ ಸಲ್ಲಿಸಿದಾಗ, ಯಾವ ಹೆಸರು ಬೇಕೆಂದು ಪ್ರಶ್ನೆ ಮಾಡಿದ್ದರು. ನಾನು ಇಂದಿರಾಜೀ ಎಂದಿದ್ದೇ ಇಂದಿರಾಗಾಂಧಿ ಅವರು ಹುತಾತ್ಮ ರಾದ ವೇಳೆ, ನಮ್ಮ ಹಳ್ಳಿಯಲ್ಲಿ ಕಲ್ಲರ್ ಟಿವಿ ತೆಗೆದುಕೊಂಡು ಹೋಗಿದ್ದೆ. ಅದಕ್ಕೆ ಒಂದು ಆಂಟೆನಾ ಇಟ್ಟು ತೋರಿಸಿದೆ. ಇಡೀ ಊರಿಗೆ ಇಂದಿರಾಗಾಂಧಿ ಬಗ್ಗೆ ತೋರಿಸಿದೆ. ಈಗಲೂ ನನ್ನ ಹೆಸರಿನಲ್ಲಿ ಇಂದಿರಾಜೀ ಚಿತ್ರಮಂದಿರ ಇದೆ. ಇಡಿ ವಿಚಾರಣೆ ವೇಳೆ ಅದು ಕೂಡ ಅವರಿಗೆ ಸಿಕ್ಕಿದೆ ಎಂದು ನೆನೆಪು ಮಾಡಿಕೊಂಡರು.
ಮೂರ್ಖ ನಿರ್ಧಾರ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ಹೆಸರನ್ನು ಪಠ್ಯ ಕ್ರಮದಿಂದ ಅಳಿಸಲು ಹೋಗಿದ್ದಾರೆ. ಇಂತಹ ಮೂರ್ಖರನ್ನು ಏನು ಹೇಳಬೇಕು ಎಂದು ಖಾರವಾಗಿ ಪ್ರಶ್ನೆ ಮಾಡಿದರು.ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ವಿಂಗ್ಸ್ ಆಫ್ ಫೈಯರ್ ನಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಬರೆದಿದ್ದಾರೆ. ನಾಸದಲ್ಲಿ ಟಿಪ್ಪು ಬಗ್ಗೆ ಏನುಹೇಳಿದ್ದಾರೆ. ಆ ಶಿಕ್ಷಣ ಸಚಿವರು ಇದಕ್ಕೆ ಕೈ ಜೋಡಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್ ಅವರು ಹಲವಾರು ಯೋಜನೆಗಳು ಕೊಟ್ಟಿದ್ದಾರೆ ರೇಷ್ಮೆ, ಪಂಚವಾರ್ಷಿಕ ಯೋಜನೆಯನ್ನು ತಂದಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ, ಆರ್ ಎಸ್‌ಎಸ್ ಅವರು ಸ್ವಾತಂತ್ರಕ್ಕಾಗಿ ಹೋರಾಡಿಲ್ಲ. ಅದಕ್ಕಾಗಿಯೇ ನಮ್ಮ ನಾಯಕರನ್ನು ಎರವಲು ಪಡೆಯುತ್ತಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇಂದಿರಾ ಗಾಂಧಿ ಪಾಲ್ಗೊಂಡಿದ್ದರು. ಯಾರು ಬ್ರಿಟಿಷರ ಪರ ಇದ್ದರು ಅವರಿಗೆ ಭಾರತರತ್ನ ಕೊಡಲು ಹೊರಟಿದ್ದಾರೆ. ಸಾವರ್ಕರ್ ಗೆ ಹಿಂದುರತ್ನ. ಆರ್ ಎಸ್ ಎಸ್ ರತ್ನ, ಬಿಜೆಪಿ ರತ್ನ ಕೊಡಲಿ ಎಂದು ವಾಗ್ದಾಳಿ ನಡೆಸಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಕಾಂಗ್ರೆಸ್ ಮುಖಂಡರಾದ ಹೆಚ್.ಎಂ.ರೇವಣ್ಣ, ಎಂ.ಸಿ.ವೇಣುಗೋಪಾಲ್,ಮೋಟಮ್ಮ, ಬಿ.ಎಲ್.ಶಂಕರ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
