ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ : ಕುಮಾರ ಸ್ವಾಮಿ ಭವಿಷ್ಯ

ಬೆಂಗಳೂರು :

        ಒಂದು ವೇಳೆ ಈಗ ಬಿಜೆಪಿ ಸರ್ಕಾರ ಬಿದ್ದರೆ, ಮತ್ತೇ ಚುನಾವಣೆ ಮಾಡಿದ್ರು ಕೂಡಾ ಯಾವುದೇ ಒಂದು ಪಕ್ಷಕ್ಕೂ ಬಹುಮತ ಬರುವುದಿಲ್ಲ. ಬೇಕಾದ್ರೆ ಬರೆದು ಇಟ್ಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

       ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಇಂದು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರನ್ನು ಬಹಳ ದಿನ ಫೂಲ್ ಮಾಡೋಕೆ ಆಗಲ್ಲ. ಬಿಜೆಪಿ ಸರ್ಕಾರ ಬಿದ್ದು ಮಧ್ಯಂತರ ಚುನಾವಣೆ ಆದರೆ ಯಾವ ಪಕ್ಷಕ್ಕೂ ಮೆಜಾರಿಟಿ ಬರಲ್ಲ ಎಂದು ಮಹಾರಾಷ್ಟ್ರದ ಚುಣಾವಣೆಯನ್ನು ಉದಾಹರಣೆ ನೀಡಿದರು.

     ಕೆಲವೇ ದಿನಗಳಲ್ಲಿ ಸರ್ಕಾರ ಅಧಿಕಾರ ಕಳೆದು ಕೊಂಡರೂ ಆಶ್ಚರ್ಯ ಇಲ್ಲ ಎಂದು ನಾನು ಹೇಳಿದ್ದಲ್ಲ. ಬಿಜೆಪಿ ಸಚಿವರೇ ಹೇಳಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಶಿಸ್ತಿನಿಂದ ಹೇಗೆ ಕೆಲಸ ಮಾಡ್ತಾರೆ? ಎಂದು ಪ್ರಶ್ನಿಸಿದ ಅವರು, ಸರ್ಕಾರದ ಬಗ್ಗೆ ನಾನು ಸಾಫ್ಟ್ಕಾರ್ನರ್ ಇರಿಸಿಕೊಂಡಿರುವುದು ಯಾಕೆ ಅಂದ್ರೆ, ನೆರೆ ಪೀಡಿತ ಪ್ರದೇಶದ ಪರಿಸ್ಥಿತಿಯನ್ನು ನಾನು ಪ್ರವಾಸ ಮಾಡಿ ಹತ್ತಿರದಿಂದ ಗಮನಿಸಿದ್ದೇನೆ. ರಾಜಕಾರಣ ಮಾಡಿ ಈ ಸರ್ಕಾರ ಅಸ್ಥಿರ ಮಾಡಲು ಹೊರಟರೆ, ನೆರೆ ಪೀಡಿತರ ಕತೆ ಏನು ಎಂಬುದಷ್ಟೆ ನನ್ನ ಆತಂಕ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link