ಕಡುಬಡವರು ಹಸಿವಿನಿಂದ ಬಳಲಬಾರದು 

ಕೊರಟಗೆರೆ
      ಕೊರೋನಾ ಅತ್ಯಂತ ಭಯಾನಕ ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ನಿಯಂತ್ರಿಸಲು ಲಾಕ್‍ಡೌನ್ ಸಮಯದಲ್ಲಿ ಕಡುಬಡವರು ಹಸಿವಿನಿಂದ ಬಳಲಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು. 
      ಅವರು ಕೊರೋನಾ ರೋಗದ ನಿಯಂತ್ರಣದಲ್ಲಿ ಲಾಕ್‍ಡೌನ್ ಹಾಗೂ ಜನರ ಪರಿಸ್ಥಿತಿ ತಿಳಿಯುವ ಕ್ಷೇತ್ರ ಪ್ರವಾಸದಲ್ಲಿ, ಪಡಿತರ ಚೀಟಿ ಇರದ ಕುಟುಂಬಗಳಿಗೆ ಆಹಾರ ಧಾನ್ಯ ನೀಡಿ ಮಾತನಾಡಿದರು.  ಕೊರೋನ ರೋಗವು ಊಹಿಸಲಾರದಷ್ಟು ಶರವೇಗದಲ್ಲಿ ಹರಡುವ ಅಂಟು ಕಾಯಿಲೆ. ಇದಕ್ಕೆ ಜನರ ಸ್ಪಂದನೆ ಮತ್ತು ಸಹಕಾರ ಅತಿ ಮುಖ್ಯ, ಈ ರೋಗವನ್ನು ತಡೆಗಟ್ಟಲು ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಸಹ ದೇಶದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
 
      ಇದರ ಉದ್ದೇಶ ಜನರಿಗೆ ರೋಗ ಹರಡದಂತೆ ತಡೆಯುವುದಾಗಿದೆ. ಇದಕ್ಕಾಗಿ ವೈದ್ಯಕೀಯ, ಪೊಲೀಸ್, ಸ್ಥಳಿಯ ಸಂಸ್ಥೆಗಳ ಪೌರ ಕಾರ್ಮಿಕರು, ತಾಲ್ಲೂಕು ಆಡಳಿತ ಸೇರಿದಂತೆ ಹಲವು ಇಲಾಖೆಗಳು ಪ್ರಾಣವನ್ನು ಲೆಕ್ಕಿಸದೆ ದುಡಿಯುತ್ತಿವೆ. ನಿಯಮ ಮೀರಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದ್ದು,  ಜನರು ಅವುಗಳಿಗೆ ಅವಕಾಶ ಮಾಡಿಕೊಡದಂತೆ ಮನವಿ ಮಾಡಿದರು. 
     ಈಗಾಗಲೆ ಪ್ರತಿ ಬಿ.ಪಿ.ಎಲ್ ಕುಟುಂಬಗಳಿಗೆ ಎರಡು ತಿಂಗಳ ಆಹಾರ ಧಾನ್ಯ ನೀಡಲಾಗಿದೆ. ್ಲ ಪಡಿತರ ಚೀಟಿ ವಂಚಿತರು ಉಪವಾಸ ಇರದಂತೆ ತಡೆಯಲು ಅಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಆಹಾರ ಪದಾರ್ಥಗಳನ್ನು ತಲುಪಿಸುವ ಕಾರ್ಯವನ್ನು ತಾಲ್ಲೂಕು ಆಡಳಿತ  ಮತ್ತು ಸ್ವಯಂ ಸೇವಕರು ಮಾಡುತ್ತಿದ್ದಾರೆ. ಈಗಾಗಲೇ ನಿರಾಶ್ರಿತರಿಗೆ ಹಲವು ಸಂಘ ಸಂಸ್ಥೆಗಳು ಬೇಯಿಸಿದ ಆಹಾರಗಳನ್ನು ನೀಡುತ್ತಿದ್ದು, ಅಗತ್ಯ ಪೂರೈಸುತ್ತಿದ್ದಾರೆ.  
 
    ಈ ಸಂದರ್ಭದಲ್ಲಿ ಅನಗತ್ಯವಾಗಿ, ಉದ್ದೇಶ ಪೂರ್ವಕವಾಗಿ ಪ್ರಯಾಣಿಸುವವರನ್ನು,  ಪರಿಸರವನ್ನು  ಕೊಳಕು ಮಾಡಿ ಕೆಡಿಸುವವರ ಮೇಲೆ   ಮುಲಾಜಿಲ್ಲದೆ ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚಿಸಿದರು. ತಾಲ್ಲೂಕಿನ ಹಲವು ಗ್ರಾಮ ಪಂಚಾಯತಿಗಳಲ್ಲಿ ಪಿಡಿಓಗಳು ಕೊರೋನಾ ಬಗ್ಗೆ ಸರಿಯಾದ ಮಾಹಿತಿ ದಾಖಲು ಮಾಡದಿರುವುದನ್ನು  ಗಮನಿಸಿದ ಶಾಸಕರು ತಾ.ಪಂ ಇಓ ಶಿವಪ್ರಕಾಶ್‍ರನ್ನು ಪ್ರಶ್ನಿಸಿದರು.  
    ಈ ಸಂದರ್ಭದಲ್ಲಿ ತಹಸೀಲ್ದಾರ್‍ಗಳಾದ ಗೋವಿಂದರಾಜು ಬಿ.ಎಂ, ಡಾ. ಜಿ ವಿಶ್ವನಾಥ್, ತಾ.ಪಂ ಇಓ ಶಿವಪ್ರಕಾಶ್, ಉಪಾಧ್ಯಕ್ಷ ವೆಂಕಟಪ್ಪ, ನರಸಮ್ಮ ಪ.ಪಂ ಸಿ.ಓ ಲಕ್ಷ್ಮಣ್‍ಕುಮಾರ್, ಸದಸ್ಯರಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು, ನಾಗರಾಜು, ಸಿಪಿಐ ನದಾಫ್, ಎಇಇ ರಂಗಪ್ಪ, ಪಿಎಸ್‍ಐ ಮುತ್ತರಾಜು, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಅರವಿಂದ್, ಮಂಜುನಾಥ್, ಜಯರಾಂ, ಅಮರ್, ಭರತ್, ಗೋಪಿನಾಥ್, ರವಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link