ಬೆಂಗಳೂರು
ಮೈತ್ರಿ ಸರ್ಕಾರದ ಸಂಪುಟದಿಂದ ಸಚಿವ ರಮೇಶ್ ಜಾರಕಿಹೊಳಿಯನ್ನು ಕೈಬಿಟ್ಟಿರುವುದಕ್ಕೆ ಕಾರಣಗಳಿರಬಹುದು. ಲಕ್ಷ್ನೀ ಹೆಬ್ಬಾಳ್ಕರ್ ಹಾಗೂ ಡಿ.ಕೆ. ಶಿವಕುಮಾರ್ ಜೊತೆಗಿನ ಅಸಮಾಧಾನವೇ ಸಂಪುಟದಿಂದ ಕೈ ಬಿಡಲು ಕಾರಣವಾಗಿದೆ ಎಂಬುದು ಸುಳ್ಳು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಿಂದ ರಮೇಶ್ ಸೇರಿದಂತೆ ಬೇರೆ ಯಾವುದೇ ಶಾಸಕರು ಬಿಜೆಪಿ ಹೋಗುತ್ತಿಲ್ಲ. ಆಪರೇಷನ್ ಕಮಲಕ್ಕೆ ಬಿಜೆಪಿಯವರು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನ ಸಫಲವಾಗುವುದಿಲ್ಲ ಎಂದರು.
ನನಗೆ 2 ವರ್ಷಗಳ ಬಳಿಕ ಸಚಿವ ಸ್ಥಾನ ಲಭಿಸುತ್ತದೆ ಅಂದು ಕೊಂಡಿದ್ದೆ. ಆದರೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟದಲ್ಲಿ ಅವಕಾಶ ಕೊಟ್ಟಿರಬಹುದು ಎಂದು ಸತೀಶ್ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದರು.
ಖಾತೆ ಹಂಚಿಕೆ ವೇಳೆ ಅಬಕಾರಿ ಖಾತೆ ನನಗೆ ಬೇಡವೆಂದಿದ್ದೇನೆ. ಬೇರೆ ಯಾವುದೇ ಖಾತೆ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆಂದು ಸತೀಶ್ ಜಾರಕಿಹೊಳಿ ಹೇಳಿದರು.