ನಗರದ ಮಧ್ಯ ಭಾಗದಲ್ಲಿರುವ ಬಸ್ ನಿಲ್ದಾಣದ ಅವ್ಯವಸ್ಥೆಗಳ ಆಗರ

ರಾಣಿಬೆನ್ನೂರ:

      ಹಾವೇರಿ ಜಿಲ್ಲೆಯಲ್ಲಿಯೆ ದೊಡ್ಡಮಟ್ಟದ ಹೆಸರು ಗಳಿಸಿದ ರಾಣಿಬೆನ್ನೂರು ನಗರದ ಮಧ್ಯ ಭಾಗದಲ್ಲಿರುವ ಬಸ್ ನಿಲ್ದಾಣವು ಅನೇಕ ಸಮಸ್ಯೆಗಳ ಗೂಡಾಗಿದೆ.

ಸಿಸಿ ಕ್ಯಾಮರ ಅಳವಡಿಕೆ ಇಲ್ಲ:       ಪ್ರತಿ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರ ಅಳವಡಿಸುವು ಸೂಕ್ತ. ಈ ಒಂದು ಅಂಶವನ್ನು ಮನಗಂಡು ಸಿಸಿ ಕ್ಯಾಮರ ಅಳವಡಿಸಿದ್ದೀರಾ? ಎಂದು ಬಸ್ ನಿಯಂತ್ರಣಾಧಿಕಾರನ್ನು ಪ್ರಶ್ನಿಸಿದಾಗ ಇಲ್ಲ ಆದಷ್ಟು ಬೇಗ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದು ಎಲ್ಲಾ ಕಡೆಗಳಲ್ಲೂ ಸಿಸಿ ಕ್ಯಾಮರ ಅಳವಡಿಸುತ್ತೇವೆ ಎಂದರು. ಆ ಭಾಗ್ಯಾ ಇನ್ನೂ ಇಲ್ಲದಿರುವುದು ಸಾರಿಗೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ತೋರಿಸುತ್ತದೆ.

     ಪುಂಡರ ಹಾವಳಿ ಇತ್ತೀಚಿಗೆ ಜಾಸ್ತಿಯಾಗಿದ್ದು, ರಾತ್ರಿ 10 ಗಂಟೆಯ ನಂತರ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಮಹಿಳೆಯರು ಸುರಕ್ಷಿತವಾಗಿ ರಾತ್ರಿಯ ಸಮಯದಲ್ಲಿ ಬೇರೆ ಬೇರೆ ಊರುಗಳಿಗೆ ತೇರಳುವುದು ಹೇಗೆ..? ಹಳ್ಳಿಗಳಿಂದ ನಗರಕ್ಕೆ ಕೆಲಸಕ್ಕೆ ಬರುವ ಹೆಣ್ಣು ಮಕ್ಕಳು ರಾತ್ರಿಯ ಸಮಯದಲ್ಲಿ ತಮ್ಮ ತಮ್ಮ ಊರಿಗೆ ತಲುಪುವುದು ಹೇಗೆ ಎಂಬುದು ಸರ್ಕಾರಕ್ಕೆ ಗಮನಕ್ಕೆ ತರಬೇಕಾಗಿದೆ.

ಸ್ವಚ್ಚತೆ ಕಾಣದ ಬಸ್ ನಿಲ್ದಾಣ:        ಎಲ್ಲೆಂದರಲ್ಲಿ ಬೀಸಾಕಿದ ಗುಟುಕದ ಚೀಟುಗಳು, ಖಾಲಿ ನೀರಿನ ಬಾಟಲ್‍ಗಳು, ತಿಂಡಿ ತಿನಿಸುಗಳ ಪಾಕೇಟ್‍ಗಳು ಅಲ್ಲಿ ಅಲ್ಲಿ ಕಾಣಸಿಗುತ್ತವೆ. ಪ್ರಯಾಣಿಕರು ತಾವು ತಲುಪುವ ಊರಿನ ಬಗ್ಗೆ ಮಾಹಿತಿ ತಿಳಿಯಲು ಹೋದಾಗ ಅವರ ಕಡೆ ನೋಡಿ ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಾರೆ. ಇನ್ನೂ ಶೌಚಾಲಯಗಳ ದುಸ್ಥಿತಿ ಹೇಳತೀರದು. ಶೌಚಕ್ಕೆ ಹೋಗಲು 5 ರೂಗಳನ್ನು ನಿಗದಿಮಾಡಿದೆ. ಅದಕ್ಕೆ ತಕ್ಕಂತೆ ಶೌಚಾಲಯಗಳನ್ನು ಸ್ವಚ್ಚವಾಗಿರಿಸಿಕೊಳ್ಳುವುದು ಅವಶ್ಯಕ ಮುಂಜಾನೆ ಸ್ವಚ್ಚಗೊಳಿಸಿದರೆ ಆಯಿತು. ಪುನಃ ಮತ್ತೆ ಮುಂಜಾನೆ ಸ್ವಚ್ಚಗೊಳಿಸುತ್ತಾರೆ.

ಬೈಕ್‍ಗಳನ್ನು ನಿಲ್ಲಿಸಲು ಸುರಕ್ಷಿತ ಸ್ಥಳವಿಲ್ಲ.      ಸಾರ್ವಜನಿಕರು ಬೇರೆ ಬೇರೆ ಊರುಗಳಿಗೆ ತೆರಲುವ ಸಂದರ್ಭದಲ್ಲಿ ಬೈಕ್‍ಗಳನ್ನು ನಿಲ್ಲಿಸಲು ಸರಿಯಾದ ಜಾಗವಿಲ್ಲ. ಅಲ್ಲದೆ ಬಸ್ ನಿಲ್ದಾಣದಲ್ಲಿಯೇ ನಾಲ್ಕು ಕಬ್ಬಿಣದ ಕಂಬಗಳನ್ನು ಹಾಕಿ ಅಲ್ಲಿಯೇ ಬೈಕ್ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ದಿನಕ್ಕೆ ಒಂದು ಬೈಕ್‍ಗೆ 10 ರೂಗಳನ್ನು ನಿಗದಿ ಮಾಡಲಾಗಿದೆ. ಆದ್ದರಿಂದ ದಿನಕ್ಕೆ ಒಂದು ಬೈಕ್ 10 ಆದರೆ 100ಕ್ಕೂ ಹೆಚ್ಚು ಬೈಕ್‍ಗಳು ನಿಲ್ಲುತ್ತವೆ ಅಂದರೆ 1000 ರೂ ಆದಾಯ ಬರುತ್ತಿದ್ದು, ಮೇಲ್ಚಾವಣೆ ಇಲ್ಲದ ಪರಿಣಾಮ ಮಳೆ ಮತ್ತು ಬಿಸಿಲುಗಳಿಂದ ಬೈಕ್‍ಗಳು ಹಾಳಾಗುತ್ತವೆ. ಇನ್ನು ಲಾಕರ್‍ಗಳು ನಿಲ್ಲದೆ ಇರುವ ಕಾರಣ ರಾತ್ರಿ ಯಾರಾದರೂ ಕಳ್ಳರು ಬೈಕ್‍ಗಳನ್ನು ಅಪಹರಿಸಿದರೆ ಅದಕ್ಕೆ ಬೈಕ್ ಸವಾರರೆ ಹೊಣೆ..! ಎಂದು ಉದಾಸೀನದ ಉತ್ತರವನ್ನು ನೀಡುತ್ತಾರೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಬೈಕ್ ಸವಾರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap