ಕೊರಟಗೆರೆ ;-
ಗುತ್ತಿಗೆದಾರ ನಿಂದ 10 ಸಾವಿರರೂ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿಕೊರಟಗೆರೆ ಪಟ್ಟಣ ಪಂಚಾಯಿತಿ ನೋಡಲ್ ಇಂಜಿನಿಯರ್ ಜನಾರ್ಧನರೆಡ್ಡಿ ಮತ್ತುಡಿ.ಗ್ರೂಪ್ ನೌಕರರ ಸುರೇಶ್‍ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿರುವಘಟನೆ ಪ.ಪಂ. ನಲ್ಲಿ ನಡೆದಿದೆ.
ಪಾವಗಡ ಮೂಲಕ ಗುತ್ತಿಗೆದಾರ ಶಮಂತಕುಮಾರ್‍ರವರದೂರಿನ ಮೇರೆಗೆತುಮಕೂರು ಲೋಕಾಯುಕ್ತ ಡಿವೈಎಸ್ಪಿ ರಘುಕುಮಾರ್ ಮಾರ್ಗದರ್ಶನದಲ್ಲಿಇನ್ಸ್‍ಪೆಕ್ಟರ್ ಶೇಖರಪ್ಪರವರ ನೇತೃತ್ವದಲ್ಲಿ ಈ ದಾಳಿನಡೆದಿದ್ದು ಗುತ್ತಿಗೆದಾರ ಶಮಂತಕುಮಾರ್ ಪಟ್ಟಣದ ವೆಂಕಟರವಣಸ್ವಾಮಿದೇವಾಲಯದಲ್ಲಿ ಸಮುದಾಯ ಭವನವನ್ನು ನಿರ್ಮಿಸುವ ಮೊದಲ ಹಂತದ ಬಿಲ್ ಮೊತ್ತ 2.74,000 ಲಕ್ಷ ರೂಗಳನ್ನು ಚೆಕ್ ಪಾವತಿಸಲು ನೋಡಲ್‍ಅದಿಕಾರಿ 10 ಸಾವಿರ ಹಣ ಕೇಳಿದ್ದಾರೆಂದು ತುಮಕೂರು ಲೋಕಾಯುಕ್ತರಿಗೆದೂರು ನೀಡಲಾಗಿ ಏ.1 ರಂದು ಸೋಮವಾರದಂದುಗುತ್ತಿಗೆದಾರರಡಿ.
ಗ್ರೂಪ್ ನೌಕರನಿಗೆ 10 ಸಾವಿರ ನೀಡುವಾಗ ಸುರೇಶ್ ನೊಂದಿಗೆ ಜನಾರ್ಥನರೆಡ್ಡಿಯನ್ನು ಸಹ ಲೋಕಾಯುಕ್ತರು ಬಂದಿಸಿ ಕಾನೂನು ರೀತಿಕ್ರಮಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನರಸಿಂಹಯ್ಯ, ಚಂದ್ರಕಾಂತ್, ಮಹೇಶ್, ಗಿರೀಶ್, ನರಸಿಂಹರಾಜು, ಶಿವಣ್ಣ, ಪದ್ಮನಾಭ್ ಹಾಗೂ ಶಿವಶರಣ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
