ನೊಂದವರಿಗೆ ಧ್ವ್ವನಿಯಾಗುವುದು ಎಲ್ಲರ ಆದ್ಯ ಕರ್ತವ್ಯ

ಶಿರಾ

       ಸಮಾಜ ಸ್ಮರಿಸುಂತಹ ಸೇವೆ ಮಾಡಿದಾಗ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ. ನೊಂದವರಿಗೆ ಧ್ವನಿಯಾಗಿ ಕಷ್ಟಗಳಿಗೆ ಸ್ಪಂದಿಸಿ ಮುನ್ನಡೆದಾಗ ಮನುಷ್ಯನ ಜೀವನ ಸಾರ್ಥಕತೆ ಕಾಣಲಿದೆ ಎಂದು ಖ್ಯಾತ ವೈದ್ಯ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

        ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಪುರಾತನ ಪ್ರಸಿದ್ಧ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಕಳಸ ನಿರ್ಮಾಣ ಕಾರ್ಯಕ್ಕೆ ಸಮಿತಿಯವರಿಗೆ ಶನಿವಾರ 1 ಲಕ್ಷ ರೂಪಾಯಿ ಹಣ ದೇಣಿಗೆಯಾಗಿ ನೀಡಿ ಅವರು ಮಾತನಾಡಿದರು.

       ಭಗವಂತನಿಗೆ ಸುಂದರ ದೇಗುಲ ನಿರ್ಮಾಣ ಮಾಡಿ, ಶುದ್ದ ಮನಸ್ಸಿನಿಂದ ಆರಾಧಿಸಿ ಪೂಜಿಸಿದಲ್ಲಿ ನಿಮ್ಮ ಇಷ್ಟಾರ್ಥ ಸಿದ್ದಿಸಲಿದೆ. ಸದಾ ಇತರರ ಒಳ್ಳೆಯದಕ್ಕಾಗಿ ಬಯಸುವ ವ್ಯಕ್ತಿಯ ಹೃದಯ ಮಂದಿರದಲ್ಲಿ ದೇವರು ಸಾಕ್ಷಾತ್ಕರಿಸುತ್ತಾನೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದು ರೈತ ಮತ್ತು ಜನ ಸಾಮಾನ್ಯರ ಕಷ್ಟ ಅರಿತಿರುವ ನಾನು ನಮ್ಮ ತಂದೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪರಂತೆ ಸಮಾಸ ಸೇವೆ ಮಾಡಬೇಕೆಂಬ ಉದ್ದೇಶದಿಂದ ಇಂತಹ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದೇನೆ ಎಂದರು.

        ಮುಖಂಡರಾದ ಪೂಜಾರ್ ನರಸಿಂಹಮೂರ್ತಿ, ಸಾಹುಕಾರ್ ಸಿದ್ದಪ್ಪ, ಚಂದ್ರಣ್ಣ, ಮಂಜುಗೌಡ, ರಾಜಣ್ಣ, ಪಾಪಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕಳವರಹಳ್ಳಿ ಭೋತಣ್ಣ, ಮೆಳೆಕೋಟೆ ಚಂದ್ರಶೇಖರ್, ಮೊಸರುಕುಂಟೆ ಪರಶುರಾಮಯ್ಯ, ಅಜಯ್‍ಗೌಡ, ಬಿ.ಹೆಚ್.ಸತೀಶ್, ಪ್ರಕಾಶ್‍ಗೌಡ, ಯರ್ರಪ್ಪ, ಪುಟ್ಟರಾಜು, ಪರಮೇಶ್, ಕೋದಂಡಪ್ಪ, ಮಧು, ದೇವರಾಜು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link