ಸರ್ಕಾರಿ ನೌಕರರ ಸಂಘದ ಚುನಾವಣೆ : ಹಾಲಿ ಅಧ್ಯಕ್ಷ ರ ನಾಮಪತ್ರ ತಿರಸ್ಕೃತ

ಚಳ್ಳಕೆರೆ

     ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಳ್ಳಕೆರೆ ಶಾಖೆಯ ನೂತನ ನಿರ್ದೇಶಕರ ಆಯ್ಕೆಗಾಗಿ ಜೂನ್ 13ರಂದು ಚುನಾವಣೆ ನಡೆಯಲಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನಾ ಕಾರ್ಯವನ್ನು ಚುನಾವಣಾಧಿಕಾರಿ, ನಿವೃತ್ತ ಕಂದಾಯಾಧಿಕಾರಿ ಸಿ.ಡಿ.ಕೆ.ಸ್ವಾಮಿ ಮಂಗಳವಾರ ನಡೆಸಿದರು.

      ಈ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರಾಗಿರುವ ಬಿ.ಎಸ್.ಮಂಜುನಾಥರವರ ನಾಮಪತ್ರ ತಿರಸ್ಕೃತವಾಗಿದ್ದು, ಬೇರೆ ಎಲ್ಲಾ ನಾಮಪತ್ರಗಳು ಸಿಂಧುವಾಗಿವೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳಿಂದ ಮಾಹಿತಿ ಪಡೆದು ಕಾಲೇಜಿನಲ್ಲಿ ಯುಜಿಸಿ ಸೌಲಭ್ಯ ಪಡೆಯುವವರು ಯಾರೂ ಸಹ ಚುನಾವಣೆಗೆ ಸ್ಪರ್ಧಿಸಲು ಆರ್ಹರಲ್ಲ ಎಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಬಿ.ಎಸ್.ಮಂಜುನಾಥ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು , ಯುಜಿಸಿ ಸೌಲಭ್ಯ ಪಡೆಯುತ್ತಿದ್ಧಾರೆ. ಅದ್ದರಿಂದ ಚುನಾವಣಾ ನಿಯಮಗಳ ಪ್ರಕಾರ ಅಧ್ಯಕ್ಷ ಬಿ.ಎಸ್.ಮಂಜುನಾಥರವರ ನಾಮಪತ್ರವನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ಧಾರೆ.

       ಚುನಾವಣಾಧಿಕಾರಿ ವಿರುದ್ದ ಕಿಡಿ :- ಅಧ್ಯಕ್ಷ ಬಿ.ಎಸ್.ಮಂಜುನಾಥ ತಮ್ಮ ನಾಮಪತ್ರ ತಿರಸ್ಕೃತವಾಗಿರುವುದಕ್ಕೆ ಅಸಮದಾನ ವ್ಯಕ್ತ ಪಡಿಸಿ ರಾಜ್ಯ ಘಟಕದ ಅಧ್ಯಕ್ಷರು ಕೇವಲ ಹೊಸದುರ್ಗ ತಾಲ್ಲೂಕಿಗೆ ಸೀಮಿತಗೊಂಡಂತೆ ಸೂಚನೆ ನೀಡಿದ್ದು, ಈ ಬಗ್ಗೆ ನಿಖರವಾದ ಯಾವುದೇ ಮಾಹಿತಿ ಕೊಡದೆ ಚುನಾವಣಾಧಿಕಾರಿಗಳು ನನ್ನ ನಾಮಪತ್ರವನ್ನು ತಿರಸ್ಕೃತಗೊಳಿಸಿದ್ಧಾರೆ. ಈ ಬಗ್ಗೆ ನನಗೆ ಇದುವರೆಗೂ ರಾಜ್ಯ ಘಟಕದ ಪದಾಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ.

     ರಾಜ್ಯದ ಇತರೆ ತಾಲ್ಲೂಕು ಕೇಂದ್ರಗಳಲ್ಲಿ ಯುಜಿಸಿ ಸೌಲಭ್ಯ ಪಡೆಯುವ ವಿವಿಧ ಕಾಲೇಜುಗಳ ಪ್ರಾಧ್ಯಾಪಕರುಗಳ ನಾಮಪತ್ರವನ್ನು ಅಂಗೀಕೃತಗೊಳಿಸಿದ್ದು, ನನ್ನ ನಾಮಪತ್ರ ತಿರಸ್ಕೃತಗೊಂಡಿರುವುದು ಉದ್ದೇಶ ತಿಳಿಯುತ್ತಿಲ್ಲ. ಈ ಬಗ್ಗೆ ಚುನಾವಣಾಧಿಕಾರಿಗಳು ಸಹ ನಿಖರವಾದ ಮಾಹಿತಿ ನೀಡುತ್ತಿಲ್ಲ. ನಾಮಪತ್ರ ತಿರಸ್ಕತಗೊಂಡ ಬಗ್ಗೆ ನ್ಯಾಯಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ಧಾರೆ. ನನ್ನ ನಾಮಪತ್ರ ತಿರಸ್ಕøತಗೊಳಿಸಲು ಯಾವುದೇ ರಾಜಕೀಯ ಒತ್ತಡದಿಂದ ಚುನಾವಣಾಧಿಕಾರಿಗಳು ಈ ರೀತಿ ವರ್ತಿಸಿದ್ಧಾರೆಂದು ನೇರ ಆರೋಪ ಮಾಡಿದ್ಧಾರೆ.

     ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಸಿ.ಡಿ.ಕೆ.ಸ್ವಾಮಿ, ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸಂಘದ ನಿರ್ದೇಶನವನ್ನು ಪಾಲಿಸಲಾಗುತ್ತಿದೆ. ಈಗಾಗಲೇ ಸಾರ್ವಜನಿಕವಾಗಿ ತಿಳಿದಂತೆ ಯುಜಿಸಿ ಸೌಲಭ್ಯ ಪಡೆಯುವವರು ಚುನಾವಣೆಗೆ ಸ್ಪರ್ಧಿಸಲು ಆರ್ಹರಲ್ಲ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಬಿ.ಎಸ್.ಮಂಜುನಾಥರವರ ನಾಮಪತ್ರವನ್ನು ನಿಯಮಗಳ ಪ್ರಕಾರ ತಿರಸ್ಕತಗೊಳಿಸಲಾಗಿದೆ ಎಂದರು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ದುರುದ್ದೇಶ ಅಡಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap