ಬೆಂಗಳೂರು
ಸಚಿವ ಡಿ.ಕೆ.ಶಿವಕುಮಾರ್,ಆದಾಯ ತೆರಿಗೆ ಕಚೇರಿಗೆ ಎರಡನೇಯ ದಿನವಾದ ಇಂದು ವಿಚಾರಣೆಗೆ ಹಾಜರಾದರು.ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ತಾಯಿ ಗೌರಮ್ಮ ಜೊತೆ ಐಟಿ ಕಚೇರಿಗೆ ಹಾಜರಾದ ಅವರನ್ನು ಆದಾಯ ತೆರಿಗೆ ಅಧಿಕಾರಿಗಳು ಸತತ 3 ತಾಸು ವಿಚಾರಣೆ ನಡೆಸಿದರು.
ಕಳೆದ ಆಗಸ್ಟ್ 2017 ರಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ್ ಆಸ್ತಿ ಮೇಲೆ ಐಟಿ ದಾಳಿ ನಡೆದಿತ್ತು. ಕನಕಪುರ ತಾಲೂಕಿನ ಆವಲಹಳ್ಳಿ ನಿವಾಸಕ್ಕೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು.ಡಿ.ಕೆ.ಶಿವಕುಮಾರ್, ಗೌರಮ್ಮ ಹೊರತುಪಡಿಸಿ ಉದ್ಯಮಿ ಸಚಿನ್ ನಾರಾಯಣ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು.
ಗುರುವಾರ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್ ,ಯಶ್ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಅದರ ಜೊತೆಗೆ ಸಚಿವ ಡಿ.ಕೆ ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಈ ಹಿನ್ನಲೆಯಲ್ಲಿ ನಿನ್ನೆ ಸಚಿವ ಡಿ.ಕೆಶಿವಕುಮಾರ್ ಹಾಗೂ ಅವರ ತಾಯಿ ಗೌರಮ್ಮ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
