ತೆರಿಗೆ ಪಾವತಿಸದವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು: ಪರಮೇಶ್ವರ್

ಬೆಂಗಳೂರು

      ನಗರದಲ್ಲಿ 2,500 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿದಿದ್ದು ತೆರಿಗೆ ಸಂಗ್ರಹವನ್ನು ಕಟ್ಟು ನಿಟ್ಟಾಗಿ ನಡೆಸಿ ತೆರಿಗೆ ಪಾವತಿಸದವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದರು.

       ನಗರದ ಅಭಿವೃದ್ದಿ ತೆರಿಗೆ ಸಂಗ್ರಹ ಬಹಳ ಮುಖ್ಯವಾಗಿದ್ದು ಬಾಕಿ ಉಳಿದಿರುವ 2,500 ಕೋಟಿ ರೂಪಾಯಿ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ತೆರಿಗೆ ಕಟ್ಟದೇ ಇದ್ದರೆ ಅಂಥವರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

       ಶಂಕರಮಠದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಟೆನ್ನಿಸ್ ರೂಫ್, ಬಿಬಿಎಂಪಿ ಕಚೇರಿ, ಪ್ರತಿಮೆ ಅನಾವರಣ ಸೇರಿ ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು ನಗರದ ರೋಡ್‍ಮ್ಯಾಪ್ ತಯಾರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಎಲಿವೇಟೆಡ್ ಕಾರಿಡಾರ್

      ಬೆಂಗಳೂರಿನ ಅಭಿವೃದ್ಧಿಗಾಗಿ 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎರಡು ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಗೊಂಡಿದ್ದೇವೆ ಇದು ಸಹ ಮತ್ತೊಂದು ಎಲಿವೇಟೆಡ್ ರಸ್ತೆ. ದರೆ ಕೊಂಚ ಪ್ರಮಾಣದಲ್ಲಿ ಸ್ಟೀಲ್ ಬಳಸುತ್ತಿರುವುದರಿಂದ ಸ್ಟೀಲ್ ಬ್ರಿಡ್ಜ್ ಎನ್ನಲಾಗುತ್ತದೆ. ಈ ಯೋಜನೆಯನ್ನು ಯಾರೋ ವಿರೋಧಿ ಮಾಡಿದರೆಂದು ಕೈಬಿಡಲಾಗುವುದಿಲ್ಲ. ಈ ಯೋಜನೆಯನ್ನು ಪಾರದರ್ಶಕವಾಗಿ ಜನರ ಮುಂದಿಡಲಿದ್ದೇವೆ. ಇದರಲ್ಲಿ ಭ್ರಷ್ಟಾಚಾರವಿದ್ದರೆ ಅದನ್ನು ಜನರೇ ಹೇಳಲಿ ಎಂದು ಪರಮೇಶ್ವರ ನುಡಿದರು.

         ಎಂದ ಅವರು ಉಕ್ಕಿನ ಸೇತುವೆ(ಸ್ಟೀಲ್‍ಬ್ರಿಡ್ಜ್) ಯೋಜನೆ ಸಂಬಂಧ ಕೆಲವರಷ್ಟೇ ವಿರೋಧ ಮಾಡುತ್ತಿದ್ದಾರೆ.ಅಭಿವೃದ್ಧಿ ಕೆಲಸಗಳಿಗೆ ಯಾರೇ ಅಡ್ಡ ಪಡಿಸಿದರು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ. ಯೋಜನೆಯಲ್ಲಿ ವ್ಯತ್ಯಾಸವಿದ್ದರು, ಜನರೇ ನೇರವಾಗಿ ಪ್ರಶ್ನೆ ಮಾಡಲಿ,ಆದರೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ಹೊಸ ಮಾರ್ಗ

         ನಗರದಲ್ಲಿ ಕುಡಿಯುವ ನೀರಿಗೆ ಬೇರೆ ಮಾರ್ಗಗಳ ಹುಡುಕಾಟ ನಡೆಯುತ್ತಿದೆ. ಕಾವೇರಿ ಐದನೇ ಹಂತ ಪೂರ್ಣಗೊಂಡರೆ ಕಾವೇರಿಯಿಂದ ನಗರಕ್ಕೆ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯ ಮಾರ್ಗದ ಅನಿವಾರ್ಯತೆ ಇದೆ ಎಂದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, ಬಿಬಿಎಂಪಿ ಯೋಜನೆ ಮತ್ತು ಸೌಲಭ್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ, ವಾರ್ಡ್ ವ್ಯಾಪ್ತಿ ಅಭಿವೃದ್ಧಿಗಾಗಿ ನಿರ್ಮಿಸಿರುವ ಕಟ್ಟಡ, ಆಸ್ತಿ ಪಾಸ್ತಿ ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

           ಹಿರಿಯ ನಾಗರಿಕರು,ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ,ದೈಹಿಕ ಸದೃಡವಾಗಿರಲು ,ಮತ್ತು ಪರಿಸರದಿಂದ ಮತ್ತು ಸಾರ್ವಜನಿಕರಿಗೆ ಆನುಕೂಲವಾಗಲಿ ಎಂದು ವಿವಿಧ ಯೋಜನೆಗಳು ಲೋಕರ್ಪಣೆ ಮಾಡಲಾಗಿದ್ದು, ಈ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದರು.

         ಈ ಸಂದರ್ಭದಲ್ಲಿ ಶಾಸಕ ಗೋಪಾಲಯ್ಯ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಮಾಜಿ ಸಚಿವ ಹೆಚ್.ರೇವಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link