ಮುತ್ತಪ್ಪರೈ ಪ್ರಕರಣ ಸಂಬಂಧ ಪೊಲೀಸ್ ಇಲಾಖೆಗೆ ನೋಟೀಸ್

ಬೆಂಗಳೂರು

     ಆಯುಧ ಪೂಜೆಯಂದು ಮುತ್ತಪ್ಪ ರೈ ಶಸ್ತ್ರಾಸ್ತ್ರಗಳನ್ನಿಟ್ಟು ಪೂಜೆ ಮಾಡಿ ಭಯಭೀತಿ ಉಂಟು ಮಾಡಿರುವ ಸಂಬಂಧ ವಕೀಲ ಜಗದೀಶ್ ಎನ್ನುವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿ-ಐಜಿಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರಿನ ಜೊತೆಗೆ ನೊಟೀಸ್ ಜಾರಿ ಮಾಡಿದ್ದಾರೆ.

    ಮುತ್ತಪ್ಪರೈ ಅವರು ಶಸ್ತ್ರಾಸ್ತ್ರಗಳನ್ನಿಟ್ಟು ಪೂಜೆ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ ಪ್ರಕರಣದ ಸಂಬಂಧ ಮುತ್ತಪ್ಪ ರೈ ಅವರ 8 ಮಂದಿ ಸೆಕ್ಯುರಿಟಿಗಾರ್ಡ್‍ಗಳ ಮೇಲೆ ಎಫ್‍ಐಆರ್ ದಾಖಲು ಆಗಿದೆ.ಆದರೆ ಮುತ್ತಪ್ಪರೈ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದಯೇ ಪ್ರೈವೇಟ್ ಸೆಕ್ಯುರಿಟಿ ರೆಗ್ಯುಲೇಷನ್ ಆಕ್ಟ್ 2005 ಅಡಿ ಮುತ್ತಪ್ಪ ರೈ ಮತ್ತು ಇತರ ಮೂವರ ವಿರುದ್ಧ ಏಕೆ ಪ್ರಕರಣ ದಾಖಲು ಮಾಡಿಲ್ಲ ಎಂದು ವಕೀಲರು ಪ್ರಶ್ನಿಸಿದ್ದಾರೆ.

      ಸಾಮಾಜಿಕ ಜಾಲತಾಣದಲ್ಲಿ ರೈ ಶಸ್ತ್ರಾಸ್ತ್ರಗಳನ್ನಿಟ್ಟು ಪೂಜೆ ಮಾಡಿರುವ ವಿಡಿಯೋ ಹಾಕಿ ಭೀತಿ ಉಂಟು ಮಾಡಿದ್ದರು. ಸಾರ್ವಜನಿಕರಿಗೆ ಭಯಭೀತಿ ಉಂಟು ಮಾಡಿದ್ದರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ.ಇದರ ಹಿಂದಿನ ಉದ್ದೇಶ ಗೊತ್ತಿದ್ದರೂ ರೈ ವಿರುದ್ಧ ಸಿಸಿಬಿ ಕ್ರಮ ಕೈಗೊಂಡಿಲ್ಲ ಎಂದು ವಕೀಲರು ದೂರಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಜರುಗಿವಂತೆ ಕೋರಿ ವಕೀಲ ಜಗದೀಶ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap