ಹೆಣ್ಣುಮಕ್ಕಳಲ್ಲಿ ಶೈಕ್ಷಣಿಕ ಪ್ರಭುದ್ಧತೆ ಹೆಚ್ಚಾಗುತ್ತಿದೆ

ಶಿರಾ:

        ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಸಾಧಕಿಯಾಗದ ಕ್ಷೇತ್ರವಿಲ್ಲ ಎಂಬಂತೆ ಹೆಣ್ಣು ಮಕ್ಕಳಲ್ಲಿ ಶೈಕ್ಷಣಿಕ ಪ್ರಬುದ್ಧತೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ರಂಗದಲ್ಲೂ ಮಹಿಳೆ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ವೈದ್ಯಶ್ರೀ ಪ್ರಶಸ್ತಿ ಪುರಸ್ಕøತ ವೈದ್ಯಾಧಿಕಾರಿ ಡಾ.ತಿಮ್ಮರಾಜು ಹೇಳಿದರು.

          ಶಿರಾ ತಾಲೂಕಿನ ಗಡಿ ಗ್ರಾಮ ದ್ವಾರನಕುಂಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

        ಮಾತೆ, ಮಡದಿ, ತಂಗಿಯಾಗಿ ಹೆಣ್ಣು ಬೇಕು, ಆದರೆ ಹೆಣ್ಣು ಮಗಳಾಗಿ ಬೇಡ ಎಂಬ ಕೀಳರಿಮೆ ಪೋಷಕರಿಂದ ದೂರವಾಗ ಬೇಕಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ತಂತ್ರಜ್ಞಾನ ತನ್ನದೆಯಾದ ಸಾಧನೆಯೊಂದಿಗೆ ಮುನ್ನಡೆಯುತ್ತಿದ್ದು, ಎಂತಹ ಕಠಿಣ ಕೆಲಸವನ್ನು ಮಾಡುವಂತ ಸಾರ್ಮಥ್ಯ ಮಹಿಳೆಯರಿಗಿದೆ.

         ಗಗನಯಾತ್ರಿ ಕಲ್ಪನ ಚಾವ್ಲ, ಮದರ್ ತೇರಾಸ, ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕನವರಂತಹ ಸಾಧನೆಗಳು ಮಹಿಳೆಯರಿಗೆ ಆದರ್ಶವಾಗಬೇಕು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದ್ದು ತಂದೆ ತಾಯಂದಿರು ಹೆಣ್ಣು ಮಗಳಿಗೆ ಉನ್ನತ ಶಿಕ್ಷಣ ಶಿಕ್ಷಣ ಕೊಡಿಸಬೇಕು ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳಲು ಯಾವುದೇ ಕಷ್ಟ ಬಂದರು ಬಾಲ್ಯ ವಿವಾಹ ಮಾಡಿ ಮಗಳ ಭವಿಷ್ಯ ಹಾಳು ಮಾಡ ಬಾರದೆಂದರು.

        ದ್ವಾರನಕುಂಟೆ ಗ್ರಾಪಂ ಸದಸ್ಯೆ ಭಾಗ್ಯಮ್ಮ ಮಾತನಾಡಿ ಮಹಿಳೆ ಮನೆಯಲ್ಲಿ ಅಡಿಗೆ ಮಾಡಿ ಕೊಂಡು ಇರುವಂತ ಗೃಹಿಣಿಯಲ್ಲ, ದೇಶದ ರಕ್ಷಣಾ ಖಾತೆಯನ್ನು ನಿಭಾಯಿಸುವಂತ ಸಾರ್ಮಥ್ಯ ಮಹಿಳೆಗಿದೆ ಎಂದರು.

         ಇದೇ ಸಂಧರ್ಭದಲ್ಲಿ ಸಾಧನೆಗೈದು ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಶಾರದಮ್ಮರನ್ನು ಸನ್ಮಾನಿಸಲಾಯಿತು.
ಮಾಜಿ ಉಪಾಧ್ಯಕ್ಷೆ ಜಯಮ್ಮ ಕೃಷ್ಣಮೂರ್ತಿ, ಸದಸ್ಯೆ ಮಮತ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಕೃಷ್ಣಪ್ಪ, ಶಿಕ್ಷಕಿ ಮಮತ, ಆರೋಗ್ಯ ಇಲಾಖೆಯ ತಿಮ್ಮರಾಜು, ಮಂಜುನಾಥ ಸ್ವಾಮಿ, ನರಸಿಂಹಮೂರ್ತಿ, ಶಿಕ್ಷಕ ಸಿದ್ದೇಶ್ ಸೇರಿದಂತೆ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap