ಸೇವಾ ಮನೋಭಾವಕ್ಕೆ ಎನ್‍ಎಸ್‍ಎಸ್ ಶಿಬಿರ ಸಹಕಾರಿ

ದಾವಣಗೆರೆ:

     ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಸೊಸೈಟಿ ಅಧ್ಯಕ್ಷ ಹೆಚ್.ಎಸ್.ಚೇತನಕುಮಾರ್ ಅಭಿಪ್ರಾಯಪಟ್ಟರು

     ತಾಲ್ಲೂಕಿನ ಎಲೆ ಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಪನಹಳ್ಳಿ ತಾಲ್ಲೂಕು ಕಂಚಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ನಡೆಯುತ್ತಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಪ್ರತಿಯೊಂದು ಹಳ್ಳಿಗಳಲ್ಲಿ ಇಂತಹ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ವೃದ್ಧಿಯಾಗಲಿದೆ ಎಂದರು.

      ಜಿ.ಪಂ ಮಾಜಿ ಸದಸ್ಯ ಬಿ.ಕರಿಬಸಪ್ಪ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಾರ್ಥಿಗಳು ನಮ್ಮ ಊರಿಗೆ ಬಂದಾಗಿನಿಂದ ಒಂದು ವಾರಕಾಲ ಊರಿನ ರಸ್ತೆ, ಚರಂಡಿ, ದೇವಸ್ಥಾನದ ಆವರಣ ಶುಚಿಗೊಳಿಸಿದ್ದಾರೆ. ಇದನ್ನು ಮುಂದೆ ಗ್ರಾಮಸ್ಥರು ಕಾಪಾಡಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.

      ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಅಧ್ಯಕ್ಷ ಹೆಚ್.ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ತಲೆ ತಗ್ಗಿಸಿ ಓದಿದರೆ ಮುಂದೆ ತಲೆ ಎತ್ತಿ ಬಾಳಬಹುದು. ಅದೇರೀತಿ ತಲೆಬಗ್ಗಿಸಿ ಮೊಬೈಲ್ ನೋಡಿದರೆ ಮುಂದೆ ತಗ್ಗಿಸಿ ಬೀಳಬಹುದು. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಿಂದ ದೂರ ಇರಬೇಕೆಂದು ಸಲಹೆ ನೀಡಿದರು.

     ಕಾಲೇಜಿನ ಪ್ರಚಾರ್ಯರಾದ ಶ್ರೀಮತಿ ಛಾಯಕುಮಾರಿ ಮಾತನಾಡಿ, ಒಂದುವಾರ ಕಾಲನಡೆದ ವಿಶೇಷ ಎನ್‍ಎಸ್‍ಎಸ್ ಶಿಬಿರಕ್ಕೆ ಸಹಕಾರ ನೀಡಿದ ಎಲ್ಲಾ ಗ್ರಾಮಸ್ಥರಿಗೆ ನಾವು ಅಭಾರಿಯಾಗಿದ್ದೇವೆ ಎಂದರು.

        ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ನೀಲವಾಡಿ ಷಣ್ಮುಖಪ್ಪ, ಮರಿಕುಂಟೆ ಚಂದ್ರಶೇಖರಪ್ಪ, ಚಾಡಿಕೆ ನಾಗರಾಜ್, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶಿವಮೂರ್ತಿ, ಎಸ್‍ಡಿಎಂಸಿ ಅಧ್ಯಕ್ಷ ಪಕ್ಕೀರಪ್ಪ ಯೋಗಶಿಕ್ಷಕ ನಾಗರಾಜ, ಶಿಬಿರಾರ್ಥಿಗಳಾದ ವಿದ್ಯಾಭಾರತಿ, ಸುರೇಶ, ಸಿದ್ದಲಿಂಗಪ್ಪ, ಮಂಜುನಾಥ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link