ಗಾಂಧೀಜಿಯವರ ಸ್ವಚ್ಚ ಭಾರತದ ಕನಸು ನನಸು ಮಾಡುವತ್ತ ರಾಷ್ಟ್ರೀಯ ಸೇವಾ ಯೋಜನ ಶಿಬಿರಗಳು.

ಚಳ್ಳಕೆರೆ

       ಗ್ರಾಮೀಣ ಭಾಗಗಳಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡಿರುವುದು ಸಂತಸದ ವಿಷಯ. ಸ್ವಚ್ಚತೆ ಇದ್ದಲ್ಲಿ ಮಾತ್ರ ಯಾವುದೇ ವ್ಯಕ್ತಿ ಅನಾರೋಗ್ಯ ಪೀಡಿತನಾಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸ್ವಚ್ಚತಾ ಅಂದೋಲನ ಯಶಸ್ಸಿಯಾಗಲು ಗ್ರಾಮೀಣ ಪ್ರದೇಶಗಳಿಗೆ ಒತ್ತು ನೀಡಬೇಕೆಂದು ಗ್ರಾಮದ ಹಿರಿಯ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಡಿ.ಟಿ.ಹೇಮಣ್ಣರೆಡ್ಡಿ ತಿಳಿಸಿದರು.

       ಅವರು, ಶನಿವಾರ ರಾತ್ರಿ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಒಂದು ವಾರಗಳ ಕಾಲ ನಮ್ಮ ಗ್ರಾಮದಲ್ಲಿ ಎಲ್ಲಾ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ಹಲವಾರು ವಿಷಯಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಆಗಮಿಸಿರುವ ಕಾಲೇಜಿನ ಪ್ರಾಂಶುಪಾಲರು, ಎನ್‍ಎಸ್‍ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ತಂಡಕ್ಕೆ ಶುಭ ಹಾರೈಸಿದರು. ಯಾವ ವಿದ್ಯಾರ್ಥಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಲ್ಲಿ ಕಾರ್ಯನಿರ್ವಹಿಸುವವನೇ ಅವನು ಉತ್ತಮವಾಗಿ ಬದುಕು ರೂಪಿಸಿಕೊಳ್ಳವ ಸಾಮಥ್ರ್ಯ ಪಡೆಯುತ್ತಾನೆಂದರು.

         ಕನ್ನಡ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಮಾತನಾಡಿ, ಗ್ರಾಮೀಣ ಭಾಗಗಳ ಸ್ವಚ್ಚತೆ ಬಗ್ಗೆ ಪ್ರಾರಂಭದ ಹಂತದಲ್ಲಿ ಜಾಗೃತಿ ಮೂಡಿಸಬೇಕೆಂಬ ಮೂಲ ಉದ್ದೇಶವನ್ನು ಮಹಾತ್ಮ ಗಾಂಧಿಜಿಯವರು ಹೊಂದಿದ್ದು, ಗಾಂಧೀಜಿಯವರ ಕನಸನ್ನು ನನಸು ಮಾಡಲು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿವೆ. ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಿಂದ ಕಳೆದ ಹತ್ತಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸಿ ಸ್ವಚ್ಚತೆ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.

        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಓ.ಬಾಬುಕುಮಾರ್ ಮಾತನಾಡಿ, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಚತೆ ಬಗ್ಗೆ ಜನರಲ್ಲಿ ನಿರಾಸಕ್ತಿ ಇದ್ದು,ಇದನ್ನು ಹೋಗಲಾಡಿಸಲು ಎನ್.ಎಸ್.ಎಸ್.ವಿದ್ಯಾರ್ಥಿಗಳ ತಂಡ ಇಡೀ ಗ್ರಾಮದಲ್ಲಿ ಸಂಚಾರ ನಡೆಸಿ ಜನರೊಂದಿಗೆ ಬೆರೆತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ನಂತರ ಸ್ವಯಂ ಪ್ರೇರಿತವಾಗಿ ಈ ಶಿಬಿರದ ಕಾರ್ಯಚಟುವಟಿಕೆಗಳಲ್ಲಿ ಜನರು ಬಂದು ಭಾಗವಹಿಸುತ್ತಿದ್ಧಾರೆ. ಕಾಲೇಜು ಮುಂಬರುವ ದಿನಗಳಲ್ಲೂ ಸಹ ಎನ್‍ಎಸ್‍ಎಸ್ ಘಟಕದ ಕಾರ್ಯಕ್ರಮಗಳಿಗೆ ಹೆಚ್ಚು ಸಹಕಾರ ನೀಡಲಿದೆ ಎಂದರು.

          ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಕೆ.ತಿಪ್ಪೇಸ್ವಾಮಿ, ಎ.ತಿಪ್ಪೇಸ್ವಾಮಿ, ಪ್ರೊ.ಡಿ.ಕರಿಯಣ್ಣ, ಪ್ರೊ. ಆರ್.ಎಸ್.ಉಮೇಶ್, ಜಿ.ಎಂ.ಮುರಳಿ, ಕೆ.ಎಂ.ಮಹಂತೇಶ್, ವಿ.ಆರ್.ತಿಪ್ಪೇಸ್ವಾಮಿ, ಮಾಲತೇಶ್, ನಿಂಗಣ್ಣ, ಕರಿಯಣ್ಣ, ರಾಮಣ್ಣ, ಎಚ್.ಮಹಲಿಂಗಪ್ಪ, ರಾಜೇಶ್ ಮೊದಲಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link