ಗ್ರಾಮೀಣ ಸಮಸ್ಯೆ ತಿಳಿಯಲು ಎನ್‍ಎಸ್‍ಎಸ್ ಸಹಕಾರಿ

ಹಿರಿಯೂರು :
    ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಅರಿಯಲು ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರಗಳು ಸಹಕಾರಿ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಮ್ಮ ಹನುಮಂತಪ್ಪ ಹೇಳಿದರು.
     ತಾಲ್ಲೂಕಿನ ಕೂನಿಕೆರೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಸಂದ್ರ ಗ್ರಾಮದಲ್ಲಿ ನಗರದ ಸರ್ಕಾರಿ ಪಿಯುಕಾಲೇಜು ಗುರುವಾರ ಹಮ್ಮಿಕೊಂಡಿದ್ದ ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಶಿಬಿರಗಳ ಮೂಲಕ ಗ್ರಾಮೀಣ ಜನರಿಗೆ ತಮ್ಮ ಗ್ರ್ರಾಮಗಳ ಸ್ವಚ್ಛತೆ, ಬಯಲುಶೌಚ ನಿಷೇಧ, ಹಾಗೂ ಮೂಢನಂಬಿಕೆಗಳಾದ ಮಾಟ-ಮಂತ್ರಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂಬುದಾಗಿ ಅವರು ಹೇಳಿದರು.
      ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಇ.ನಾಗರಾಜ್ ಹಿರಿಯ ಉಪನ್ಯಾಸಕ ಜಿ.ರಾಮಚಂದ್ರ, ಕೆ.ನಾಗಣ್ಣ, ಎಚ್.ಎಸ್.ಮೈಲಾರಲಿಂಗಂ, ಡಾ||ಮಾರುತಿ ಶಿಬಿರಾಧಿಕಾರಿ ಎಚ್.ಟಿ.ಮಹಂತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link