ಮಕ್ಕಳ ಸರ್ವತೋಮುಖ ಪ್ರಗತಿಗೆ ರಾ.ಸೇ.ಯೋ ಪೂರಕ : ಶಶಿಕಲಾ.ಎಂ.ಆರ್

ತಿಪಟೂರು

         ಮಕ್ಕಳ ಸರ್ವತೋಮುಖ ಪ್ರಗತಿಗೆ ವ್ಯಕ್ತಿಕತ್ವ ವಿಕಸನಕ್ಕೆ, ಸಮಾಜ ಮುಖಿ ಕೆಲಸಕಾರ್ಯಗಳಿಗಾಗಿ ಚಿಕ್ಕದಿನಿಂದಲೇ ಮಕ್ಕಳನ್ನು ಅನುವುಗೊಳಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಪಾತ್ರವಹಿಸುತ್ತದೆಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶಶಿಕಲಾ.ಎಂ.ಆರ್ ತಿಳಿಸಿದರು.

         ತಾಲ್ಲೂಕಿನ ನೊಣವಿನಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಪ್ರೌಢಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರಸ್ತುತ ವರ್ಷದಿಂದ ರಾಷ್ಟ್ರೀಯ ಯೋಜನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಇದರ ಉದ್ಘಾಟನೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳ ಸರ್ವತೋಮುಖ ಪ್ರಗತಿಗೆ ವ್ಯಕ್ತಿಕತ್ವ ವಿಕಸನಕ್ಕೆ, ಸಮಾಜಮುಖಿ ಕೆಲಸಕಾರ್ಯಗಳಿಗಾಗಿ ಚಿಕ್ಕಂದಿನಿಂದಲೇ ಮಕ್ಕಳನ್ನು ಅನುವುಗೊಳಿಸುವ ಕಾರ್ಯಕ್ರಮಕ್ಕೆ ಸಂತೋಷದಿಂದ ಉದ್ಘಾಟಿಸಿದ್ದು ಮಕ್ಕಳು ಸಮಾಜದ ಏಳಿಗೆಗಾಗಿ ಶ್ರಮಿಸಿ ಕಾರ್ಯಪ್ರವೃತ್ತರಾಗಲು ಈ ಯೋಜನೆಯು ಅತ್ಯುತ್ತಮ ದಾರಿದೀಪವಾಗಿದ್ದು ಇದರ ಸದುಪಯೋಗಪಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆನೀಡಿದರು.

        ಅಧ್ಯಕ್ಷತೆ ವಹಿಸಿ ಮಾತನಾಡಿದ, ಕ್ಷೇತ್ರಶಿಕ್ಷ್ಷಣಾಧಿಕಾರಿ ಬಿ.ಮಂಗಳಗೌರಮ್ಮ ತಾಲ್ಲೂಕಿನಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ರಾಷ್ಟ್ರೀಯ ಸೇವಾ ಯೋಜನೆಯು ಪ್ರಸ್ತುತ ವರ್ಷದಿಂದ ಈ ಶಾಲೆಗೆ ಮಂಜೂರಾಗಿದ್ದು ಶಾಲೆಯ ಎಲ್ಲಾ ಶಿಕ್ಷಕವೃಂದದವರು ಸಂಘಟಿತರಾಗಿ ಮಕ್ಕಳು, ಸಾರ್ವಜನಿಕರ ಸಹಕಾರದೊಂದಿಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ನಾಯಕತ್ವ, ಅಭಿವ್ಯಕ್ತತೆ, ಸ್ವಾತಂತ್ರ್ಯ, ಸಹಕಾರ, ಸಹಭಾಗಿತ್ವ, ಪರೋಪಕಾರ, ಸೇವಾ ಮನೋಭಾವನೆ, ಸಾಂಘಿಕಗುಣ, ಸಾಮಾಜೀಕರಣ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಿ ಇತರೆ ಶಾಲೆಗಳಿಗೆ ಅನುಷ್ಠಾನಗೊಳಿಸಲು ಮಾದರಿಯಾಗಬೇಕೆಂದರು.

         ಸ.ಪ್ರ.ದ.ಕಾ.ನೊಣವಿನಕೆರೆಯ ಉಪನ್ಯಾಸಕರಾದ ಮಲ್ಲಿಕಾರ್ಜುನಪ್ರಭು ಮಾತನಾಡಿ, ಮಕ್ಕಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸ, ಉಪಯೋಗ, ಅನುಷ್ಠಾನದ ಮಾರ್ಗಗಳು, ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

          ಕಾರ್ಯಕ್ರಮದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಲಿಂಗಪ್ಪ, ಸಿದ್ದಯ್ಯ, ಅಧ್ಯಕ್ಷರು ಪ್ರೌಢಶಾಲಾ ಮು.ಶಿ ಸಂಘ, ತಿಪಟೂರು, ತಾ.ರಾ.ಸೇ.ಯೋ. ನೋಡಲ್ ಅಧಿಕಾರಿ ಸಿ.ಡಿ.ಎಸ್.ಮೂರ್ತಿ, ಮು.ಶಿ. ತ್ಯಾಗರಾಜು, ಶಿಕ್ಷಕರುಗಳಾದ ರುಕ್ಮಿಣಿ, ನಾಗಮಣಿ, ಗಂಗಮ್ಮ ಮಾರಲ್, ಡಿ.ಸಿ.ಪುಟ್ಟರಾಮೇಗೌಡ, ಮುಜಾಮಿಲ್ ಏಜಾಜ್, ಕಾರ್ಯಕ್ರಮಾಧಿಕಾರಿ ಜಗದೀಶ್.ಸಾ.ಚ ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link