ಬೆಂಗಳೂರು
ನುಗ್ಗೆ ಸೊಪ್ಪು ಕೊಡುವುದಾಗಿ ನಂಬಿಸಿ ದ್ರಾಕ್ಷಿತೋಟಕ್ಕೆ ಕರೆಸಿಕೊಂಡು ಮಹಿಳೆಯ ಕೊಲೆಗೈದು ಮಾಂಗಲ್ಯ ಸರ ದೋಚಿದ್ದ ಆರೋಪಿಗೆ ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್ ಅವರು ಆರೋಪಿಗೆ 6 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
2014 ರಲ್ಲಿ ರಾಂಪುರ ಗ್ರಾಮದ ವಾಸಿಯಾಗಿದ್ದ ಹೇಮಾವತಿ (30)ಎಂಬುವವರನ್ನು ದ್ರಾಕ್ಷಿ ತೋಟದಲ್ಲಿ ನುಗ್ಗೆ ಸೊಪ್ಪು ಕೊಡುವುದಾಗಿ ತೋಟಕ್ಕೆ ಕರೆದುಕೊಂಡು ಹೋಗಿ ಆಕೆಯ ಕೊರಳಿಲ್ಲಿದ್ದ ಮಾಂಗಲ್ಯ ಸರ ಕಳವು ಮಾಡಿ ರಾಡಿನಿಂದ ಹೊಡೆದು ಕೊಲೆಗೈದ ಆರೋಪಿ ಚಂದ್ರಶೇಖರ್‍ಗೆ 6 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ ಕೊಲೆ ಮಾಡಿದ ಪ್ರಕರಣವು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪ್ರಾರಂಭಿಸಿ ಪೊಲೀಸರು ಸೂಕ್ತ ಸಾಕ್ಷಾಧಾರಗಳೊಂದಿಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪವು ಸಾಭೀತಾಗಿದ್ದು, ಚಂದ್ರಶೇಖರ್‍ಗೆ ಆರು ವರ್ಷಗಳ ಕಾಲ ಕಠಿಣ ಶಿಕ್ಷೆ, 10 ಸಾವಿರ ದಂಡ ವಿಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







