ಬರಗೂರು
ವೈದ್ಯರು ನೀಡುವ ಔಷಧಿಯನ್ನು ಸಕಾಲದಲ್ಲಿ ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕಾಳಜಿಮಾಡುವುದು ಬೇಯಿಸಿದ ಹಸಿಸೋಪ್ಪು ತರಕಾರಿ ಹಳಸಂದೆ ಹೆಸರಕಾಳು ಹಣ್ಣು ಅಗತ್ಯವಾಗಿ ಗರ್ಬಿಣಿಯರು ತಿನ್ನುವುದರಿಂದ ಹುಟ್ಟುವ ಮಗು ಆರೋಗ್ಯವಂತ ಶಿಶುವನ್ನು ಪಡೆಯಲು ಸಾಧ್ಯ ಎಂದು ಬರಗೂರು ವೃತ್ತ ಮೇಲ್ವಿಚಾರಕಿ ಸುರೇಖಟಾಕೆ ಸಲಹೆ ನೀಡಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ವೈಧ್ಯಾಧಿಕಾರಿಗಳ ಕಚೇರಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಸಾರ್ವಜನಿರ ಆಸ್ಪತ್ರೆ ಮತ್ತು ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಅಯೋಜಿಸಿದ್ದ ಪೌಷ್ಠಿಕ ಆಹಾರ ಕಾರ್ಯಕ್ರಮ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಗರ್ಭಿಣಿಯರು ಹೆಚ್ಚಿನ ಪೌಷ್ಠಿಕವಾದ ಆಹಾರವನ್ನು ಸೇವಿಸುವ ಮೂಲಕ ಹುಟ್ಟುವ ಮಗುವಿಗೆ ಆಪೌಷ್ಠಿಕತೆ ಹೋಗಲಾಡಿಸಲು ಸಾಧ್ಯವಾಗುವುದು ಎಂದರು.
ಡಾ.ರಾಜು ಮಾತನಾಡಿ ನಮ್ಮ ಸುತ್ತಮುತ್ತಲಿನಲ್ಲೇ ಬೇಳೆಯುವ ನಾಟಿ ತರಕಾರಿಗಳೆ ಬಳಸಿದರೆ ನಮ್ಮ ಆರೋಗ್ಯ ರಕ್ಷಕವಚದಂತೆ ನಮ್ಮ ಆರೋಗ್ಯವನ್ನು ಕಾಪಡುವುವವು ಶುದ್ದವಾದ ಆಹಾರ ಶುದ್ದವಾದ ನೀರು ಬಳಕೆಯಿಂದ ನೆಮ್ಮದಿಯ ಆರೋಗ್ಯವನ್ನು ಕಾಯಲು ಸಾಧ್ಯ ಎಂದರು.
ಈ ಸಮಾರಂಭದಲ್ಲಿ ಆರೋಗ್ಯ ಇಲಾಖೆಯ ಕೆ,ಎನ್.ರಮೇಶ್, ಶ್ರೀನಿವಾಸ್‍ಮೂರ್ತಿ ಕಿರಿಯ ಆರೋಗ್ಯ ಸಹಾಯಕಿ ಲತಾ, ಸಿದ್ದಗಂಗಮ್ಮ,ಸಿಡಿಪಿ ಇಲಾಖೆಯ ಪ್ರೇರೆಕ್ಷಣಾಧಿರಿ ಭವ್ಯ, ತ್ರೀವೇಣಿ,ಪದ್ಮ, ಅಂಗನವಾಡಿ ಕಾರ್ಯಕರ್ತೆರು, ಆಶಾಕಾರ್ಯಕರ್ತೆರು ಭಾಗವಹಿಸಿ ಕಾರ್ಯಕ್ರಮ ಯಶ್ವಯಾಗಿ ಜರುಗಿತು,