ಓಬವ್ವ ಜಯಂತೋತ್ಸವ ಹಾಗೂ ಸಮಾಧಿ ಪೂಜಾ ಕಾರ್ಯಕ್ರಮ

ಚಿತ್ರದುರ್ಗ:

         ಚಿತ್ರದುರ್ಗದ ಚರಿತ್ರೆ, ಇತಿಹಾಸವನ್ನು ಇಮ್ಮಡಿಗೊಳಿಸಿದ ಕೀರ್ತಿ ವೀರವನಿತೆ ಒನಕೆ ಓಬವ್ವ ಅವರಿಗೆ ಸಲ್ಲುತ್ತದೆ. ದುರ್ಗದ ಕಲ್ಲಿನ ಕೋಟೆಯಲ್ಲಿ ಓಬವ್ವ ಕಿಂಡಿ ಇಂದು ಅಜರಾಮರ. ಸರಕಾರ ಓಬವ್ವಳ ಜಯಂತಿಯನ್ನು ಆಚರಿಸಬೇಕು ಮತ್ತು ಸಮಾಧಿ ಸ್ಥಳದಲ್ಲಿ ಕೂಡಲೇ ಸ್ಮಾರಕ ಮಾಡಬೇಕು ಎಂದು ವೀರವನಿತೆ ಒನಕೆ ಓಬವ್ವ ಸಂರಕ್ಷಣಾ ಸಮಿತಿ ಸದಸ್ಯೆ ಹಾಗೂ ಕಾನೂನು ವಿದ್ಯಾರ್ಥಿನಿ ಎನ್.ಬಿ.ಭಾರ್ಗವಿ ದ್ರಾವಿಡ್ ಆಗ್ರಹಿಸಿದರು.

         ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿರುವ ವೀರವನಿತೆ ಒನಕೆ ಓಬವ್ವ ಸಮಾಧಿ ಬಳಿ ಭಾನುವಾರ ಹಮ್ಮಿಕೊಂಡಿದ್ದ ಓಬವ್ವ ಜಯಂತೋತ್ಸವ ಹಾಗೂ ಸಮಾಧಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲಾಡಳಿತಕ್ಕೆ ಈಗಾಗಲೇ ನಾವು ಸಮಾಧಿ ದುರಸ್ಥಿ ಹಾಗೂ ನಾಮಫಲಕ ಹಾಕಲು ಮನವಿ ಮಾಡಿದ್ಧೇವೆ. ಇನ್ನೂ ಆ ಕಾರ್ಯವಾಗಿಲ್ಲ, ಸರಕಾರ ಕೂಡಲೇ ಎಚ್ಚೆತ್ತುಕೊಂಡು ಓವ್ವ ಅವರ ಸ್ಮಾರಕ ನಿರ್ಮಾಣ ಮಾಡದಿದ್ದೆರೇ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ಒನಕೆ ಹಿಡಿದು ವಿಧಾನ ಸೌಧ ಚಲೋ ಮಾಡಲಾಗುವುದು ಎಂದರು.

          ಇಂದು ಸರಕಾರ ಅನೇಕ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ಒನಕೆ ಓಬವ್ವ ಜಯಂತಿಯನ್ನು ಮಾಡಿಲ್ಲ. ಮೊದಲು ಚಿತ್ರದುರ್ಗ ಜಿಲ್ಲಾಡಳಿತ ಇದನ್ನ ಆರಂಭಿಸಲಿ. ಜಿಲ್ಲಾ ಪೆÇಲೀಸ್ ಇಲಾಖೆ ಒಬವ್ವ ಪಡೆಯನ್ನು ಮಾಡಿದೆ ಆದರೆ ಒನಕೆ ಓವ್ವಳ ಸಮಾಧಿಗೆ ರಕ್ಷಣೆ ನೀಡಲಿ ಎಂದರು.

         ವಕೀಲರಾದ ಗೋವರ್ಧನ್ ಪಿಲಾಲಿ ಅವರು ಮಾತನಾಡಿ ಇಲ್ಲಿ ಓಬವ್ವ ಸಮಾದಿ ಇದೆಯೇ ಎಂದು ಕೇಳಬೇಕಾದ ಅನಿವಾರ್ಯತೆ ಬಂದಿದೆ. ಇಲ್ಲಿ ಮೊದಲು ವೀರವನಿತೆ ಒನಕೆ ಓಬವ್ವ ಸಮಾಧಿ ಎಂದು ನಾಮಫಲಕ ಹಾಕಲಿ. ಅಧಿಕಾರಿಗಳು ಈ ಕೆಲಸ ಮಾಡದಿದ್ದರೇ ಅಭಿಮಾನಿಗಳಾದ ನಾವೇ ಮಾಡುತ್ತೇವೆ. ಅಲ್ಲದೆ ಇಲ್ಲಿನ ಗೈಡ್‍ಗಳಿಗೆ ಅಧಿಕಾರಿಗಳು ಸಮಾಧಿ ಸ್ಥಳ ತೋರಿಸುವಂತೆ ಸೂಚನೆ ನೀಡಲಿ ಎಂದು ಆಗ್ರಹಿಸಿದರು.

        ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಸರಕಾರ ಅನೇಕ ಪ್ರಾಧಿಕಾರಗಳನ್ನು ಮಾಡಿದೆ ಅದರಂತೆ ವೀರವನಿತೆ ಒನಕೆ ಓಬವ್ವ ಅಭಿವೃಧ್ಧಿ ಪ್ರಾಧಿಕಾರ ರಚಿಸಲಿ. ಇದರಿಂದ ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ ಇಲ್ಲಿ ಸೂಕ್ತ ಸಂರಕ್ಷಣೆ ಮಾಡುವ ಕೆಲಸವೂ ಆಗಬೇಕು. ಮತ್ತು ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಜಾತ್ಯಾತೀತವಾಗಿ ಮಾಡುವ ಅಗತ್ಯ ಇದೆ ಎಂದರು.

       ಚಿತ್ರದುರ್ಗದಲ್ಲಿ ಮದಕರಿನಾಯಕ ಹಾಗೂ ಒನಕೆ ಓಬವ್ವ ಅವರ ಕುರಿತು ಅಧ್ಯಯನ ಮಾಡಲು ಮತ್ತು ಸಂಶೋಧನೆ ಮಾಡುವ ಹಿನ್ನೆಲೆಯಲ್ಲಿ ಅಧ್ಯಯನ ಕೇಂದ್ರವೂ ಆಗಬೇಕು ಸರಕಾರ ಚಿತ್ರದುರ್ಗದ ಕೋಟೆ ಅಭಿವೃದ್ಧಿ ಮಾಡುವ ಜತೆಗೆ ಸಮಾಧಿಯನ್ನು ಉನ್ನತೀಕರಣ ಮಾಡಿ ಎಲ್ಲರಿಗೂ ತಿಳಿಯುವಂತೆ ಮಾಡಬೇಕು ಎಂದರು.

       ಒನಕೆ ಓಬವ್ವ ಜಯಂತಿ ಸಂಘಟಕರಾದ ಹೆಚ್.ಡಿ.ನವೀನ್ ಮಾತನಾಡಿ ಯುವ ಸಮೂಹ ಸಂಘಟಿತರಾಗಿ, ಮುಂದಿನ ವರ್ಷದವೇಳೆಗೆ ಸ್ಮಾರಕ ನಿರ್ಮಿಸಿ ವಿವಿಧ ಸಂಘಟನೆಗಳ ಆಶ್ರಯಲ್ಲಿ ಓಬವ್ವ ಜಯಂತಿಯನ್ನ ಅರ್ಥಪೂರ್ಣವಾಗಿ ಮಾಡೋಣ. ಚಿತ್ರದುರ್ಗದ ಜಿಲ್ಲಾದಿಕಾರಿ ಕಚೇರಿ ಸಮೀಪ ಇರುವ ಪ್ರತಿಮೆ ಮುಂದೆಯೇ ಸಮಾರಂಭ ಆಯೋಜಿಸೋಣ ಎಂದರು.

       ವಿವಿಧೆಡೆ ಮಾಲಾರ್ಪಣೆ: ಇದೇ ವೇಳೆ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ನಂತರ ಸಿಹಿ ವಿತರಿಸಲಾಯಿತು. ನಂತರ ಕೋಟೆಯಿಂದ ಆಗಮಿಸಿ ಅಭಿಮಾನಿಗಳು ನಗರದ ರಾಜವೀರ ಮದಕರಿ ನಾಯಕ ಪ್ರತಿಮೆಗೆ, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ವೀರವನಿತೆ ಒನಕೆ ಓಬವ್ವ ವೃತ್ತದ ಓಬವ್ವ ಪ್ರತಿಮೆಯನ್ನು ಜಲದಿಂದ ಸ್ವಚ್ಚಗೊಳಿಸಿ ಬೃಹತ್ ಮಾಲಾರ್ಪಣೆ ಮಾಡಿ ಜಯಗೋಷ ಮೊಳಗಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link