ಅಪರಾಧ ತಡೆ ಮಸಾಚರಣೆ ಕಾರ್ಯಕ್ರಮ

ಹರಪನಹಳ್ಳಿ:

      ತಾಲ್ಲೂಕಿನ ತೆಲಿಗಿ ಗ್ರಾಮದಲ್ಲಿ ಗುರುವಾರ ಹಲವಾಗಲು ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಸಾಚರಣೆ ಕಾರ್ಯಕ್ರಮ ನಡೆಸಲಾಯಿತು.

          ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಡಿ.ವೈ.ಎಸ್.ಪಿ. ನಾಗೇಶ್ ಐತಾಳ, ಉತ್ತಮ ಹಾಗೂ ಅಪರಾಧ ರಹಿತ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಹೇಳಿದರು.

      ಸಿಪಿಐ ದುರುಗಪ್ಪ ಮಾತನಾಡಿ, ಅಪರಾಧ ಮಾಡುವುದರಿಂದ ಮಾನಸಿಕವಾಗಿ ನೋವು ಹೆಚ್ಚಾಗಿ ನೆಮ್ಮದಿಯ ಜೀವನ ನಡೆಸುವುದು ಅಸಾಧ್ಯ. ಯುವಜನತೆ ಅಪರಾಧಗಳಿಂದ ದೂರವುಳಿದು ಸಮಾಜಬಾಹಿರ ಕೆಲಸಗಳಿಗೆ ಕಡಿವಾಣ ಹಾಕಲು ಸಹಕರಿಸಬೇಕು ಎಂದರು.
ಪಿಎಸ್‍ಐ ತಿಪ್ಪೇಸ್ವಾಮಿ ಮಾತನಾಡಿ,ತಿಳಿದು ಅಥವಾ ತಿಳಿಯದೇ ಮಾಡುವ ಅಪರಾಧಗಳು ಭವಿಷ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ. ಕಾನೂನಿನ ಚೌಕಟ್ಟಿನೊಳಗೆ ಜೀವನ ಸಾಗಿಸಿದರೆ ಅಪರಾಧಗಳಿಂದ ದೂರವಿರಬಹುದು ಎಂದರು.ಶಾಲಾ ಮಕ್ಕಳು ಅಪರಾಧ ತಡೆ ಕುರಿತ ಫಲಕ ಹಿಡಿದು ಜಾಥಾ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಲವಾಗಲು, ತೆಲಿಗಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link