ಹರಪನಹಳ್ಳಿ,
ಅಪರಾಧ ಮುಕ್ತ ಮಾಡಲು ಕೇವಲ ಪೋಲಿಸರಿಂದ ಮಾತ್ರ ಸಾದ್ಯವಿಲ್ಲ, ಇದಕ್ಕೆ ಸಾರ್ವಜನಿಕರು ಸಹ ಕೈಜೋಡಿಸಿದಲ್ಲಿ ಅಪರಾಧ ಮುಕ್ತ ಮಾಡಬಹುದು ಎಂದು ವೃತ್ತ ನಿರೀಕ್ಷಕ ಡಿ.ದುರುಗಪ್ಪ ಹೇಳಿದರು.
ಪಟ್ಟಣದ ಎಸ್.ಯು.ಜೆ.ಎಂ.ಕಾಲೇಜಿನಲ್ಲಿ ಶನಿವಾರ ಪೊಲೀಸ್ ಇಲಾಖೆಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ರೀತಿಯ ಅಪರಾಧಗಳು ಕಂಡು ಬಂದಲ್ಲಿ ಕೂಡಲೇ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ದೂರುಗಳನ್ನು ನೀಡುವಲ್ಲಿ ಯಾವುದೇ ಹಿಂಜರಿಕೆ ಮಾಡದೆ ಧೈರ್ಯವಾಗಿ ದೂರು ಸಲ್ಲಿಸಿ, ಪೋಲಿಸರು ಸಾರ್ವಜನಿಕರ ಸ್ನೇಹಿಯಾಗಿರುತ್ತಾರೆ ಎಂದರು.
ಅಪರಾಧಗಳ ಬಗ್ಗೆ ಮಾಹಿತಿ ನೀಡಿದವರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯದ ಕರ್ತವ್ಯ, ಪೊಲೀಸರು ಜನಸ್ನೇಹಿಯಾಗಿದ್ದಾರೆ ಎಂದ ಅವರು ಮಹಿಳಾ ಮತ್ತು ಮಕ್ಕಳ ಕುರಿತಾದ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಪಿಎಸ್ಐ ಎಸ್.ಎಂ.ಉಮೇಶ್ ಕುಮಾರ್ ಮಾತನಾಡಿ ಡಿಸೆಂಬರ್ ತಿಂಗಳನ್ನು ಅಪರಾದ ತಡೆ ಮಾಸಾಚರಣೆಯನ್ನಾಗಿ ಆಚರಿಸಲಾಗುವುದು ರಾಮಾಯಣ ಕಾಲದಲ್ಲಿಯು ಅಪರಾಧಗಳು ನಡೆಯುತ್ತಿದ್ದವು. ಆದರೆ ಬಲ್ಲವರು ಬುದ್ದಿ ಹೇಳುತ್ತಿದ್ದರು. ಅಪರಾದ ತಡೆಗೆ ಸಾಕಷ್ಟು ಕಾನೂನು ಜಾರಿಗೆ ತರಲಾಗಿದೆ ಆದರೂ ಅಪರಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ, ಸಂಚಾರ ನಿಯಮ ಪಾಲಿಸದಿರುವುದು ಮತ್ತು ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮರಣ ಹೊಂದುತಿದ್ದಾರೆ ಕಾರಣ ಹೆಲ್ಮೆಟ್ ಹಾಕದಿರುವುದು ಮತ್ತು ಅತಿಯಾದ ವೇಗ ಎಂದರು.
ಕಾಲೇಜು ಪ್ರಾಚಾರ್ಯ ಎಲ್. ಕೃಷ್ಣಾ ಸಿಂಗ್, ಉಪನ್ಯಾಸಕರಾದ ಆರ್.ಚನ್ನಬಸವನಗೌಡ, ಎಸ್.ಚನ್ನಬಸಪ್ಪ, ಆರ್.ಪಿ ಭದ್ರಶೆಟ್ಟಿ, ಎಸ್.ಕೊಟ್ರೇಶ್, ಬಿ.ಕೃಷ್ಣಮೂರ್ತಿ, ಹೆಚ್.ಬಿ.ಸೋಮರೆಡ್ಡಿ, ಮಲ್ಲಿಕಾರ್ಜುನ, ಜಯದೀಪ, ಪ್ರವೀಣ್, ಎಂ.ಚಿಕ್ಕಪ್ರಸಾದ್, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ