ಆಸ್ಪತ್ರೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಭೇಟಿ..!

ಹೊಳಲ್ಕೆರೆ:

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮುತ್ತುಗದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಡಾ.ಸುಹೇಲ್ ಮತ್ತು ಸಿಬ್ಬಂದಿಯೋಂದಿಗೆ ಸಮಾ ಲೋಚನೆ ನಡೆಸುತ್ತಾ ಔಷಧ ದಾಸ್ತಾನು ನೀರು ನೈರ್ಮಲ್ಯ ಸಿಬ್ಬಂದಿ ಹಾಜರಾತಿ ಯೋಜನೆಗಳ ಅನುಷ್ಠಾನ, ಆರ್ಥಿಕ ಭೌತಿಕ ಪ್ರಗತಿ ಅವಲೋಕನ ನಡೆಸಿದರು.

     ತಾಲ್ಲುಕಿನ ಬಿಜೆಪಿ ಅಧ್ಯಕ್ಷ ಸಿದ್ದೇಶ್ ಮಾತನಾಡಿ ಆಸ್ಪತ್ರೆಗೆ ಆಂಬುಲೆನ್ಸ್ ಅಗತ್ಯತೆ, ಜನರೇಟರ್ ರಿಪೇರಿ, ನೀರಿನ ವ್ಯವಸ್ಥೆ ಬಗ್ಗೆ ಮನವಿ ಮಾಡಿದರು.ಡಿಹೆಚ್.ಓ ವiಂಜುನಾಥ್ ಮಾತನಾಡಿ ಶೀಘ್ರವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ತಿಳೀಸುತ್ತಾ ಡಾ.ಸುಹೇಲ್ ಅಗತ್ಯ ಔಷಧ ಪಟ್ಟಿ ಪಡೆದು ಡಾ.ಜಯಸಿಂಹ ತಾಲ್ಲುಕಿನ ಆರೋಗ್ಯಾಧಿಕಾರಿಗಳಿಗೆ ನೀಡಿ ಈ ಕೂಡಲೆ ವ್ಯವಸ್ಥೆ ಮಾಡಲು ತಿಳಿಸಿದರು. ತಾಲ್ಲುಕಿನ ಆರೋಗ್ಯಾಧಿಕಾರಿಗಳು ಪಕ್ಕದ ಬಿ.ದುರ್ಗ ಸಮುದಾಯ ಆರೋಗ್ಯ ಕೇಂದ್ರದಿಂದ ಅಗತ್ಯ ಔಷಧಗಳನ್ನು ತರಿಸಿ ಸ್ಥಳದಲ್ಲೇ ವ್ಯವಸ್ಥೆ ಮಾಡಿದರು.

      ಕುಂದು ಕೊರತೆ ಸಮಾಲೋಚನಾ ಸಭೆಯಲ್ಲಿ ಗ್ರಾಮದ ಮುಖ್ಯಸ್ಥರು, ಗ್ರಾಮ ಪಣಚಾಯಿತಿ ಸದಸ್ಯರು, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಂತೋಷ್, ಆಶಾ, ಕಮಲಮ್ಮ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link