ಚೆನ್ನಮ್ಮ ವಸತಿ ಶಾಲೆಗೆ ಜಂಟಿ ನಿರ್ದೇಶಕ ಭೇಟಿ..!

ಪಾವಗಡ

    ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಮಂಗಳವಾರ ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್.ಎಸ್.ಪ್ರೇಮನಾಥ್ ಭೇಟಿ ನೀಡಿ, ವಿದ್ಯಾರ್ಥಿನಿಯರು ಮತ್ತು ಪೋಷಕರಿಂದ ದೂರುಗಳನ್ನು ಸ್ವೀಕರಿಸಿದರು.

    ಇದೇ ವೇಳೆ ಪೋಷಕರು ತಮ್ಮ ಮಕ್ಕಳ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡುವ ಪ್ರಾಂಶುಪಾಲರನ್ನು ತಕ್ಷಣದಿಂದಲೇ ಅಮಾನತ್ತು ಮಾಡ ಬೇಕು. ಪ್ರಾಂಶುಪಾಲರು ಇದೇ ಶಾಲೆಯಲ್ಲಿ ಮುಂದುವರೆದರೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಕನ್ನಡ, ಇಂಗ್ಲೀಷ್ ಮತ್ತು ಸಮಾಜ ಪಠ್ಯ ವಿಷಯಗಳ ಶಿಕ್ಷಕರೆ ಇಲ್ಲವಾದರೆ ನಮ್ಮ ಮಕ್ಕಳ ಶ್ಯಕ್ಷಣಿಕ ಭವಿಷ್ಯವೇನು ಎಂದು ಪೋಷಕರು ಕಣ್ಣಿರು ಹಾಕಿ, ಮಕ್ಕಳ ವರ್ಗಾವಣೆ ಚೀಟಿ (ಟಿಸಿ) ಕೊಡುವಂತೆ ಪಟ್ಟು ಹಿಡಿದಿದ್ದಾರೆ.

     ಮಕ್ಕಳ ಜೊತೆ ಆಸಭ್ಯವಾಗಿ ವರ್ತಿಸುವ ಪ್ರಾಂಶುಪಾಲರನ್ನು ಶಾಲಾ ಆವರಣದಿಂದ ಹೊರ ಕಳುಹಿಸಿ ಎಂದು ಪಟ್ಟು ಹಿಡಿದಿದ್ದಲ್ಲದೆ, ನಿಮ್ಮ ಮಕ್ಕಳ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿದರೆ ನೀವು ಸುಮ್ಮನೆ ಕೂರುವಿರಾ ಎಂದು ಪೋಷಕರು ಖಾರವಾಗಿಯೇ ಜಂಟಿ ನಿರ್ದೇಶಕರನ್ನು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಡಿಸಿದ್ದಾರೆ. ಆಗ ಇಲ್ಲಿನ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳು, ಸಿಇಓ ಮತ್ತು ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗುವುದು ಎಂದು ಪ್ರೇಮನಾಥ್ ಭರವಸೆ ನೀಡಿದ್ದಾರೆ.

   ಶಾಲೆಗೆ ಪಟ್ಟಣದ ಪೋಲೀಸರು ಕೂಡ ಭೇಟಿ ನೀಡಿ, ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ. ಹಿರಿಯ ಮುಖಂಡ ತಿಮ್ಮಾರೆಡ್ಡಿ ಸಹ ಭೇಟಿ ನೀಡಿ, ಪೋಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಇಂತಹ ವಿಕೃತ ಮನೋಭಾವದ ಪ್ರಾಂಶುಪಾಲರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link