ಗುಬ್ಬಿ :
ಕರೋನಾವೈರಸ್ ಸೋಂಕು ಯಾರಿಗೂ ಹರಡದಿರಲಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಕ್ರಮಗಳನ್ನು ಸಾರ್ವಜನಿಕರಿಗೋಸ್ಕರ ಜಾರಿಗೊಳಿಸಿದರೆ ಅದರ ಪಾಲನೆ ಮಾತ್ರ ಪ್ರಜ್ಞಾವಂತರಾದ ನಾಗರಿಕರು ಮಾಡುತ್ತಿಲ್ಲ.
ಅವಶ್ಯಕವಾದ ವಸ್ತುಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಿದ್ದರೆ, ಸರ್ಕಾರದ ಆದೇಶ ಮತ್ತು ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಿ ಎಂದಿನಂತೆ ಎಲ್ಲಾ ಅಂಗಡಿ-ಮುಂಗಟ್ಟುಗಳು ತೆರೆಯಲಾಗಿದೆ.
ಗುಬ್ಬಿ ಪಟ್ಟಣದಲ್ಲಿ ಜೆರಾಕ್ಸ್, ಆಟೋಮೊಬೈಲ್, ನಂದಿನಿ ಪಾರ್ಲರ್ ಗಳ ಮುಂದೆ ಜನರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗೋಜಿಗೆ ಹೋಗದೆ ಕರೋನ ಸೋಂಕಿಗೆ ಹೆದರದೆ ಎಂದಿನಂತೆ ವ್ಯಾಪಾರವನ್ನು ಮಾಡುತ್ತಿದ್ದಾರೆ.
ಸಾರ್ವಜನಿಕರು ವಾಹನಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದ್ದರೂ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಕೇಂದ್ರ ರಾಜ್ಯ ಸರ್ಕಾರದ ಆದೇಶವನ್ನು ಗಾಳಿಗೆತುರಿದ್ದು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ