ಹರಪನಹಳ್ಳಿ
ತಾಲೂಕಿನ ಬೀಮ್ಲಾತಾಂಡದಲ್ಲಿ ಏ.17ರಂದು ನಡೆಯಲಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆಗಟ್ಟಿದ್ದಾರೆ.
ದಾವಣಗೆರೆ ತಾಲೂಕು ನೆರೆನಹಳ್ಳಿ ಗುಡ್ಡದಟ್ಟಿ ತಾಂಡ ನಿವಾಸಿ ಸುನೀಲ್‍ನಾಯ್ಕ್ ಅವರೊಂದಿಗೆ ಹರಪನಹಳ್ಳಿ ತಾಲೂಕಿನ ಬೀಮ್ಲಾತಾಂಡದ 16 ವರ್ಷ ವಯಸ್ಸಿನ ವಯಸ್ಸಿನ ಬಾನಮ್ಮ( ಹೆಸರುಬದಲಿಸಿದೆ ) ಅವರೊಂದಿಗೆ ವಿವಾಹ ನಿಗಧಿಯಾಗಿತ್ತು.
ಬುಧುವಾರ ಬೆಳಿಗ್ಗೆ 11 ಗಂಟೆಗೆ ಮಾಡುತ್ತಿದ್ದ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಮದುಮಗಳ ಮತ್ತು ವರನ ತಂದೆ-ತಾಯಿಯಂದಿರಿಂದ ತಪ್ಪೊಪ್ಪುಗೆ ಬರೆಸಿಕೊಂಡಿದ್ದಾರೆ.ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಸಂಯೋಜಕರು ದಾಳಿ ನಡೆಸಿದ್ದರು. ಹಲುವಾಗಲು ಪೊಲೀಸ್ ಠಾಣೆ ಪಿಎಸ್‍ಐ ಪ್ರಕಾಶ್, ಮೇಲ್ವಿಚಾರಕಿ ರೇಣುಕಮ್ಮ, ಸಂಯೋಜಕ ಬಿ.ಮಲ್ಲಿಕಾರ್ಜುನ ಇತರರಿದ್ದರು.