ಬೆಂಗಳೂರು
ರಸ್ತೆಯಲ್ಲಿ ಹತ್ತು, ಇಪ್ಪತ್ತು, ಐವತ್ತು ರೂಪಾಯಿ ಬಿಸಾಡಿ ಗಮನ ಬೆರೇಡೆ ಸೆಳೆದು ಹಣ ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್ನ ಮತ್ತಿಬ್ಬನರು ಚಿಕ್ಕಬಳ್ಳಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ಓಜಿಕುಪ್ಪಂ ಗ್ಯಾಂಗ್ನ ರಾಜೇಶ್, ಶಣ್ಮುಗಂ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ 11.80 ಲಕ್ಷ ನಗದು 2 ಬೈಕ್ ಜಪ್ತಿ ಮಾಡಿ ಹಲವು ಪ್ರಕರಣಗಳನ್ನು ಪೊಲೀಸರು ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಓಜಿಕುಪ್ಪಂ ಗ್ಯಾಂಗ್ನ ನಾಲ್ವರನ್ನು ದಕ್ಷಿಣ ವಿಭಾಗದ ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಆಂಧ್ರ ಪ್ರದೇಶ, ಕರ್ನಾಟಕ ಗಡಿನಾಡಿನಲ್ಲಿ ಪೊಲಿಸರ ನಿದ್ದೆ ಕೆಡಿಸಿದ್ದ ಈ ಗ್ಯಾಂಗ್ ಎ.ಟಿ.ಎಂ, ಬ್ಯಾಂಕ್, ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಬರುವರನ್ನು ಗುರಿಯಾಗಿಸಿಕೊಂಡು ಹಣ ದೋಚಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದರು.
ರಸ್ತೆಯಲ್ಲಿ 10, 20 ರೂಪಾಯಿ ಬಿಸಾಡಿ ನಿಮ್ಮ ಹಣ ಬಿದ್ದಿದೆ ನೋಡಿ ಎಂದು ಗಮನ ಬೇರೆಡೆ ಸೆಳೆಯುತ್ತಿದ್ದ ಓಜಿಕುಪ್ಪಂ ಗ್ಯಾಂಗ್ಹಣ ಚಿನ್ನಾಭರಣವನ್ನು ಕ್ಷಣಾರ್ಧದಲ್ಲಿ ದೋಚಿ ಪರಾರಿಯಾಗುತ್ತಿತ್ತು.ಓಜಿಕುಪ್ಪಂ ಜಾಲ ಇತ್ತೀಚೆಗೆ ಆಂಧ್ರ, ಕರ್ನಾಟಕ ಗಡಿನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಚಿಂತಾಮಣಿ, ಚಿಕ್ಕಬಳ್ಳಾಪುರ ಗೌರಿಬಿದನೂರು, ಬಾಗೇಪಲ್ಲಿ ಗುಡಿಬಂಡೆ ಹಾಗೂ ಆಂಧ್ರದ ಗೊರಂಟ್ಲದಲ್ಲಿ ಕೃತ್ಯಕ್ಕೆ ಇಳಿದಿತ್ತು.
ಬಂಧಿತ ಆರೋಪಿಗಳು ಚಿಕ್ಕಬಳ್ಳಾಪುರದಲ್ಲಿ ಕೈಚಳಕ ತೋರಿ ಕೊಳವನಹಳ್ಳಿಯ ಜಯರಾಮಯ್ಯ ಹಾಗೂ ರತ್ನಮ್ಮ ದಂಪತಿ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಮೂರುವರೆ ಲಕ್ಷ ರೂಗಳನ್ನು ಗಮನ ಬೆರೇಡೆ ಸೆಳೆದು ಕಳ್ಳತನ ಮಾಡಿದ್ದರು.
ಈ ಸಂಬಂಧ ದೂರು ದಾಖಲಿಸಿದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲಿಸರು ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರತಿ ದಿನ ಒಂದೊಂದು ಊರಿನಲ್ಲಿ ಕಾರ್ಯಾಚರಣೆ ನಡೆಸುವ ಚಿತ್ತೂರು ಜಿಲ್ಲೆ ನಗಾರಿ ಮಂಡಲಂನ ಓ.ಜಿ.ಕುಪ್ಪಂ ಗ್ಯಾಂಗ್, ಬ್ಯಾಂಕ್, ಎ.ಟಿ.ಎಂ, ವಾಣಿಜ್ಯ ಸ್ಥಳಗಳಲ್ಲಿ ಹಣ ಪಡೆದು ಬರುವವರನ್ನು ಗುರಿಯಾಗಿಸಿ ಕೃತ್ಯ ನಡೆಸುತ್ತಿದ್ದರು.ಮತ್ತು ಬರುವ ಔಷಧ, ತುರಕೆ ಔಷಧ ಬಳಸುತ್ತಿದ್ದರಲ್ಲದೆ ರಸ್ತೆಯಲ್ಲಿ ಹತ್ತು, ಇಪ್ಪತ್ತು ರೂಪಾಯಿ ಬಿಸಾಡಿ ನೋಡಿ ನಿಮ್ಮ ಹಣ ಬಿದ್ದಿದೆ ಎಂದು ಅವರ ಗಮನ ಸೆಳೆದು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








