ಓಲಾ ಸೇವೆ ಮತ್ತೆ ಆರಂಭ..!!

ಬೆಂಗಳೂರು

        ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ 6 ತಿಂಗಳ ನಿಷೇಧಕ್ಕೆ ಒಳಗಾಗಿದ್ದ ಓಲಾ ಕ್ಯಾಬ್ ಕಂಪನಿಗೆ ಇಂದು ಸರ್ಕಾರ ಪುನರಾಂಭಕ್ಕೆ ಅನುಮತಿನೀಡಿ ಆದೇಶ ನೀಡಿದೆ 

       ಓಲಾ ಕಂಪನಿಯ ಸೇವಾ ಪರವಾನಗಿಯನ್ನು ರದ್ದುಗೊಳಿಸಿ ಸಾರಿಗೆ ಇಲಾಖೆ ನೀಡಿದ್ದ ಆದೇಶವನ್ನು ಹಿಂಪಡೆದಿದ್ದು. ಈ ಕುರಿತಂತೆ ಸಾಮಾಜಿಕ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿ, ಎಂದಿನಂತೆ ಓಲಾ ಕ್ಯಾಬ್ ಗಳು ಸಂಚರಿಸಲಿವೆ ಜನರಲ್ಲಿ ಯಾವುದೇ ಆತಂಕ ಬೇಡ ಎಂದು ತಿಳಿಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯು ಮಾರ್ಚ್ 18ರಂದು ನೋಟಿಸ್ ಜಾರಿಮಾಡಿತ್ತು. ಓಲಾ ಕಂಪನಿಯು ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿ ಅಗ್ರಿಗೇಟರ್ ರೂಲ್ಸ್ 2016ರನ್ನು ಉಲ್ಲಂಘಿಸಿದೆ ಎಂದು ತಿಳಿಸಲಾಗಿತ್ತು.

       ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಓಲಾ ಸಂಸ್ಥೆಯೂ ಈ ನಿಯಮವನ್ನು ಕಡೆಗಣಿಸಿ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು ಎಂದು ತಿಳಿಸಿದೆ. ಅಗ್ರಿಗೇಟರ್ ನಿಯಮದ 11(1)ಸೆಕ್ಷನ್ ಪ್ರಕಾರ ಆರು ತಿಂಗಳ ಕಾಲ ಓಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಸಾರಿಗೆ ಆಯುಕ್ತ ವಿಪಿ ಇಕ್ಕೇರಿ ತಿಳಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link