ಒಳಾಂಗಣ ಮಾಲಿನ್ಯಕ್ಕೆ 35 ಲಕ್ಷ ಜನ ಬಲಿ!

ದಾವಣಗೆರೆ:

     ಮನೆಯೊಳಗಿನ ಒಳಾಂಗಣ ವಾಯು ಮಾಲಿನ್ಯದಿಂದ ಪ್ರತಿ ವರ್ಷ ಜಗತ್ತಿನಲ್ಲಿ 35 ಲಕ್ಷ ಮಂದಿ ಅಸುನಿಗುತ್ತಿದ್ದರೆ, ಭಾರತದಲ್ಲಿ 12 ಲಕ್ಷ ಜನ ಬಲಿಯಾಗುತ್ತಿದ್ದಾರೆಂದು ಒಳಾಂಗಣ ವಾಯು ಮಾಲಿನ್ಯ ಮತ್ತು ಮಕ್ಕಳ ಆರೋಗ್ಯದ ರಾಷ್ಟ್ರೀಯ ಸಂಚಾಲಕ ಡಾ.ಎನ್.ಕೆ. ಕಾಳಪ್ಪನವರ್ ತಿಳಿಸಿದ್ದಾರೆ.

     ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಾಂಗಣ ವಾಯು ಮಾಲಿನ್ಯಕ್ಕಿಂತಲೂ 10 ಪಟ್ಟು ಹೆಚ್ಚು ಒಳಾಂಗಣ ವಾಯು ಮಾಲಿನ್ಯವು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತಿದೆ. ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಿಷಯದಲ್ಲಿ ಇದು ಮೂರನೇ ಮಾರಕವಾಗಿದ್ದು, ಇದರಿಂದ ಜಗತ್ತಿನಲ್ಲಿ 35 ಲಕ್ಷ ಹಾಗೂ ಭಾರದಲ್ಲಿ 12 ಲಕ್ಷ ಜನರು ಸಾವನಪ್ಪುತ್ತಿದ್ದಾರೆ. ಅಲ್ಲದೇ, ಐದು ವರ್ಷದೊಳಗೆ ಮೃತ ಹೊಂದುವ ಮಕ್ಕಳಲ್ಲಿ ಶೇ.56 ರಷ್ಟು ಮಕ್ಕಳು ಈ ಕಾರಣದಿಂದಲೇ ಅಸುನೀಗುತ್ತಿದ್ದಾರೆಂದು ಮಾಹಿತಿ ನೀಡಿದರು.

      ಭಾರತದ ಶೇ.80 ರಷ್ಟು ಮನೆಗಳಲ್ಲಿ ಇಂದಿಗೂ ಸಹ ಕಟ್ಟಿಗೆ, ಸಗಣಿಯ ಕುಳ್ಳುಗಳನ್ನು ಉರುವಲಾಗಿ ಬಳಸುತ್ತಿರುವುದು, ಮನೆಯಲ್ಲಿಯೇ ಧೂಮ್ರಪಾನ ಮಾಡುವುದು, ಬಣ್ಣ, ಪಾಲೀಶ್, ವಾರ್ನಿಸ್‍ನಂತ ಪದಾರ್ಥಗಳಿಂ, ಬಾಡಿಸ್ಪ್ರೆ, ಸೌಂದರ್ಯ ವರ್ಧಕ, ಸೊಳ್ಳೆ ಬತ್ತಿ, ಟಾಯಲೇಟ್ ಕ್ಲೀನರ್, ರೂಂ ಫ್ರೇಶನರ್, ಗ್ಯಾಸ್ ಗೀಜರ್, ಅಗರಬತ್ತಿ, ಧೂಪ, ಲೋಬಾನ್, ಕರ್ಪೂರ ಬಳಕೆಯಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಪಾರ್ಟಿಕುಲೇಟ್ ಮ್ಯಾಟರ್, ಕಾರ್ಬನ್ ಮನೋಕ್ಸೈಡ್ ಬಿಡುಗಡೆಯಾಗಿ, ಮನೆಯ ವಾತಾವರಣವೇ ಕಲುಷಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

       ಒಳಾಂಗಣ ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಕಣಗಳು ನಮ್ಮ ದೇಹವನ್ನು ಪ್ರವೇಶಿಸಿದ ನಂತರದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ತಲೆನೋವು, ನಿದ್ರಾಹೀನತೆ, ಏಕಾಗ್ರತೆಯಲ್ಲಿ ಕೊರತೆ, ತಲೆ ಸುತ್ತುವುದು, ಕಣ್ಣು ಉರಿ, ಕೆಮ್ಮು, ಅಲರ್ಜಿ ಅಸ್ತಮ, ಕಫ ಕಟ್ಟುವುದು ಕಿವು ಸೋರಲಿದ. ಕಾಲಕ್ರಮೇಣ ಉಸಿರಾಟದ ತೊಂದರೆ, ಪುಪ್ಪಸ, ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಕೊರತೆ, ಕ್ಯಾನ್ಸರ್, ಹೃದಯರೋಗ ಬರುವ ಅಪಾಯವೂ ಇದೆ ಎಂದು ಅವರು ವಿವರಿಸಿದರು.

       ಈ ಕಲುಷಿತ ವಾತಾವರಣಕ್ಕೆ ಒಳಗಾಗದೇ, ಒಳಾಂಗಣ ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾವನ್ನು ತಡೆಯಲು, ಸೊಳ್ಳೆ ಬತ್ತಿ ಬಳಕೆಯಿಂದ ದೂರ ಉಳಿಯಬೇಕು. ಮನೆಯಲ್ಲಿ ಧೂಮ್ರಪಾನ ಮಾಡಬಾರದು. ಗ್ಯಾಸ್ ಗೀಜರ್, ಕಟ್ಟಿಗೆ ಉರವಲುಗಳಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ಜೊತೆಗೆ ಉತ್ತಮ ಆಹಾರ ಸೇವನೆ, ಮನೆಯ ವಾತಾವರಣ ಶುಚಿಯನ್ನಾಗಿಟ್ಟುಕೊಳ್ಳುವುದು, ಗಂಟೆಗೆ ಕನಿಷ್ಠ ಆರು ಬಾರಿಯಾದರೂ ಮನೆಯೊಳಗೆ ಗಾಳಿ ಬದಲಾವಣೆಯಾಗಬೇಕು.

      ಬಾಡಿ ಸ್ಪ್ರೇ, ಸೌಂದರ್ಯ ವರ್ಧಕಗಳಿಂದ ಅಂತರ ಕಾಯ್ದುಕೊಳ್ಳಬೇಕು. ಮನೆಯಲ್ಲಿ ಕಡ್ಡಾಯವಾಗಿ ಎಲ್‍ಪಿಜಿ ಗ್ಯಾಸ್ ಉಪಯೋಗಿಸಬೇಕು. ಎಸಿಗಳನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅತ್ಯವಶ್ಯವಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಡಾ.ವಿನಯ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap