ಆ್ಯಸಿಡ್ ಕುಡಿದು ವೃದ್ದೆ ಸಾವು …!!!

ಬೆಂಗಳೂರು:

       ಕುಡಿಯುವ ನೀರು ಎಂದು ತಪ್ಪು ತಿಳಿದು ಆಸಿಡ್ ಕುಡಿದು ವೃದ್ದೆಯೊಬ್ಬರು ಮೃತಪಟ್ಟ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

        ಮೃತ ದುರ್ದೈವಿಯು 68 ವರ್ಷದ ಅರ್ಯಮಾಲ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಅರ್ಯಮಾಲ ಅವರು  ನಿದ್ದೆ ಮಂಪರಿನಲ್ಲಿ ಎದ್ದು ನೀರು ಕುಡಿಯುವ ಬದಲು ಗ್ರಾನೈಟ್ ಕ್ಲೀನ್ ಮಾಡಲು ಬಳಸುವ ಪರ್ಮುಟೇಟೆಡ್ ಆಸಿಡ್ ಕುಡಿದಿದ್ದಾರೆ ಕುಡಿದ ಬಳಿಕ ಅರ್ಯಮಾಲ ಹೊಟ್ಟೆ ನೋವು ಎಂದು ಒದ್ದಾಡಿದ್ದಾರೆ.ಕೂಡಲೆ ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಅರ್ಯಮಾಲ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link