ಬೆಂಗಳೂರು
ಒಎಲ್‍ಎಕ್ಸ್‍ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರನ್ನು 5 ಲಕ್ಷ 10 ಸಾವಿರ ಖರೀದಿಸುವ ಮಾತುಕತೆ ನಡೆಸಿ ಮುಂಗಡವಗಿ 10 ಸಾವಿರ ನೀಡಿ ಉಳಿದ ಹಣಕ್ಕೆ ಚೆಕ್ ನೀಡಿ ಹಣಕ್ಕೆ ದೋಖಾ ಮಾಡಿ ಖದೀಮನೊಬ್ಬ ಪರಾರಿಯಾಗಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.
ಯಶವಂತಪುರದ ರಾಜೇಶ್ ಒಎಲ್‍ಎಕ್ಸ್‍ನಲ್ಲಿ ತಮ್ಮ ಮಹಿಂದ್ರಾ ವೆರಿಟೋ ಕಾರನ್ನು ಮಾರಾಟ ಮಾಡಲು ಜಾಹೀರಾತು ಪ್ರಕಟಿಸಿದ್ದು ಇದನ್ನು ನೋಡಿದ ಸೋಮಶೇಖರ್ ಎಂಬಾತ 5 ಲಕ್ಷ 10 ಸಾವಿರ ರೂ.ಗೆ ಖರೀದಿಸುವುದಾಗಿ ಮುಂದೆ ಬಂದಿದ್ದ.
ಮೊದಲು 10 ಸಾವಿರ ರೂ. ನಗದು ನೀಡಿ ಬಾಕಿ ಉಳಿದ ಹಣವನ್ನು ಚೆಕ್ ಮೂಲಕ ನೀಡಿರುವುದಾಗಿ ತಿಳಿಸಿದ್ದಾನೆ.ಆತನ ನಯವಾದ ಮಾತು ನಂಬಿ ರಾಜೇಶ್ ಕಾರು ಮಾರಾಟ ಮಾಡಿದ್ದರು. ಆದರೆ ಚೆಕ್ ಡ್ರಾ ಮಾಡಲು ಹೋದಾಗ ಆತನ ಅಕೌಂಟ್‍ನಲ್ಲಿ ಹಣವಿಲ್ಲ ಎಂಬುದು ತಿಳಿದಿದೆ.
ಹಣಕ್ಕಾಗಿ ರಾಜೇಶ್ ಅವರು ಸೋಮಶೇಖರ್‍ಗೆ 3-4 ತಿಂಗಳಿನಿಂದ ಕರೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನು ಆಧಾರ್ ಕಾರ್ಡ್ ಇಲಾಖೆಯಲ್ಲಿ ತಾನು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ ಸೋಮಶೇಖರ್ ಇದೇ ರೀತಿ ಅನೇಕರಿಗೂ ಆತ ಮೋಸ ಮಾಡಿದ್ದು ತನಿಖೆಯಲ್ಲಿ ಸೋಮಶೇಖರ್ ದಾವಣಗೆರೆಯ ಸುರನ್ಯಾ ಗ್ರಾಮದವನೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿರುವ ಯಶವಂತಪುರ ಪೊಲೀಸರು ತನಿಖೆ ಮುಂದುವರೆಸಿ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ