ಒನಕೆ ಓಬವ್ವ ಸಿನಿಮಾದ ಆಡಿಯೋ ಬಿಡುಗಡೆ

ಚಿತ್ರದುರ್ಗ:

    ಚಿತ್ರದುರ್ಗ ಒನಕೆ ಓಬವ್ವ ಎಂಬ ಐತಿಹಾಸಿಕ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಜೂನ್10ರಂದು ನಗರದ ಐಶ್ವರ್ಯ ಪೋರ್ಟ್ ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಎಸ್.ಆರ್.ಎಸ್‍ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.

      ಚಿತ್ರದುರ್ಗ ಎಂದರೆ ಮದಕರಿ ನಾಯಕ, ಒನಕೆ ಓಬವ್ವ ಹೆಸರು ಚಿರಸ್ಥಾಯಿ. ಇಲ್ಲಿ ನಡೆದ ಪ್ರತಿ ಘಟನೆಗಳು ರೋಚಕ. ಪ್ರಸಿದ್ಧ ಕಾದಂಬರಿಕಾರರಾದ ಡಾ. ಬಿ.ಎಲ್.ವೇಣು ಅವರ ಐತಿಹಾಸಿಕ ಕಾದಂಬರಿ ಆಧರಿಸಿ ಭಾಗ್ಯೋದಯ ಸಿನಿ ಕ್ರಿಯೇಷನ್ ಮೂಲಕ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಬಿ.ಎ. ಪುರುಷೋತ್ತಮ್ ಓಂಕಾರ್ ಅವರ ನಿರ್ದೇಶನದಲ್ಲಿ ಎ.ದೇವರಾಜ್‍ಅವರ ನಿರ್ಮಾಣದಲ್ಲಿ ಅವರ ಸಹ ನಿರ್ಮಾಪಕರಾಗಿ ಚಿತ್ರ ಸಿದ್ದಗೊಂಡಿದ್ದು ವಿಶಾಲ ಕರ್ನಾಟಕದ ಹಂಚಿಕೆಯನ್ನು ಜಯಲಕ್ಷ್ಮಿ ಮೂವೀಸ್ ಜವಾಬ್ದಾರಿ ಹೊತ್ತಿದೆ.

    ಹೊಸ ಪ್ರತಿಭೆಯನ್ನು ಈ ಮೂಲಕ ಪರಿಚಯ ಮಾಡಲಾಗುತ್ತಿದ್ದು ವಿಶೇಷವಾಗಿ ಒಬವ್ವನ ಪಾತ್ರದಲ್ಲಿ ಹೊಸ ನಟಿಯಾಗಿ ತಾರಾ ಅವರು ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಬಿ.ರಾಮಮೂರ್ತಿಅವರ ಮಗನಾದ ಅಕ್ಷಯ್ ನಾಯಕ ನಟರಾಗಿದ್ದಾರೆ. ಅಲ್ಲದೆ ವಿಶೇಷವಾಗಿ ಚಿತ್ರದುರ್ಗದ ಐತಿಹಾಸಿಕ ಮಹಿಮೆಯನ್ನು ಚಿತ್ರದ ಮೂಲಕ ಅನಾವರಣ ಮಾಡಲಾಗಿದೆ.

     ಚಿತ್ರದುರ್ಗದ ಒನಕೆ ಓಬವ್ವ ಎಂಬ ಚಿತ್ರದ ಆಡಿಯೋವನ್ನು ಚಿತ್ರದುರ್ಗದಲ್ಲಿಯೇ ಮಾಡುವ ಮೂಲಕ ಚಿತ್ರದುರ್ಗಕ್ಕೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ ಎಂದು ಬಿ.ಎ. ಲಿಂಗಾರೆಡ್ಡಿ ಹೇಳಿದ್ದಾರೆ.ಅಂದು ವಿಶೇಷವಾಗಿ ಆಡಿಯೋ ಬಿಡುಗಡೆ, ಪೊಸ್ಟರ್ ಲಾಂಚ್ ಮಾಡಲಾಗುತ್ತಿದ್ದು ಚಳ್ಳಕೆರೆ ಶಾಸಕರು. ಹಟ್ಟಿಚಿನ್ನದಗಣಿ ನಿಗಮದ ಅಧ್ಯಕ್ಷರಾದ ರಘುಮೂರ್ತಿ ಹಾಗೂ ವಿವಿಧಗಣ್ಯರು ಮತ್ತು ಚಿತ್ರದ ಎಲ್ಲಾ ನಟ ನಟಿಯರು ಭಾಗವಹಿಸುತ್ತಿದ್ದಾರೆ.

      ಚಿತ್ರದುರ್ಗದ ಇತಿಹಾಸವನ್ನುಜಗತ್ತಿಗೆ ಪರಿಚಯಿಸಿದಕೀರ್ತಿ ಪತ್ರಿಕೆ ಮತ್ತು ಮಾಧ್ಯಮಗಳಿಗೆ ಸಲ್ಲುತ್ತದೆ. ಈ ಚಿತ್ರವು ಅಪ್ಪಟ ಸ್ಪೂರ್ತಿಯನ್ನು, ಅದ್ಬುತ ಸಂಭಾಷಣೆಯನ್ನು ಹೊಂದಿದ್ದು ಡಾ.ಬಿ.ಎಲ್.ವೇಣು ಅವರ ಬರಹದ ಶಕ್ತಿ ಇಲ್ಲಿ ಅನಾವರಣವಾಗಿದೆ. ದುರ್ಗದ ಕಲಾಸಿರಿ ಸಂಘದ ಎಲ್ಲಾ ಸದಸ್ಯರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

     ಚಿತ್ರದುರ್ಗದ ಎಲ್ಲಾ ಸಂಘಟನೆಗಳು ಕೈ ಜೋಡಿಸಿವೆ. ಸಾಹಿತಿಗಳು, ಲೇಖಕರು, ಪ್ರಗತಿಪರರು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಬಿ.ಎ.ಲಿಂಗಾರೆಡ್ಡಿ ಅವರು ಮನವಿ ಮಾಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link