ಹರಿಹರ:
ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿಗುವಂತಹ ಮಾಹಿತಿಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಜಯಂತ್ ಪೂಜಾರಿ ಅವರು ಸಲಹೆ ನೀಡಿದರು.
ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿನ ಕೊಂಡಜ್ಜಿ ವಲಯದ ಜ್ಞಾನವಿಕಾಸ ಕೇಂದ್ರದಿಂದ ಹಮ್ಮಿಕೊಂಡಿದ್ದ ವಿವಾಹ ನೊಂದಾವಣೆ ಮತ್ತು ಉದ್ಯೋಗಖಾತ್ರಿ ಯೋಜನೆಗಳ ಬಗ್ಗೆ ಒಂದು ದಿನದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಜ್ಞಾನವಿಕಾಸ ಕೇಂದ್ರದಿಂದ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷಕರ ವಿಚಾರ. ಪ್ರಸ್ತುತ ದಿನಮಾನದಲ್ಲಿ ನಡೆಯುತ್ತಿರುವ ವಿಷಯಕ್ಕೆ ಅನುಗುಣವಾಗಿ ಕೇದ್ರದಿಂದ ವಿವಾಹ ನೊಂದಾವಣೆ ಮತ್ತು ಉದ್ಯೋಗಖಾತ್ರಿ ಯೋಜನೆಗಳ ಬಗ್ಗೆ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ನಮ್ಮ ಸಂಘದಲ್ಲಿ ಸೇರಿರುವ ಎಲ್ಲಾ ಮಹಿಳೆಯರು ಸ್ವಂತ ಯದ್ಯೋಗ ಮಾಡುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಮಹಿಳಾ ಜ್ಞಾನವಿಕಾಸಕೇಂದ್ರದಲ್ಲಿ ಸಿಗುವಂತಹ ಮಾಹಿತಿಗಳನ್ನು ಸದುಪಯೋಗಪಡಿಸಿಕೊಂಡು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ಶುಭ ಹಾರೈಸಿದರು.
ವಕೀಲರಾದ ಶುಭ ಅವರು ಮಾತನಾಡಿ, ವಿವಾಹ ನೊಂದಾವಣೆಯ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಮಾಹಿತಿಯನ್ನು ತಿಳಿಯಪಡಿಸಿದರು. ಹಾಗೂ ಮಹಿಳೆಯರಿಗಿರುವ ಸಾಮಾನ್ಯ ಕಾನೂನುಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಹೆಣ್ಣು ಮಗುವಿಗೆ 18 ವರ್ಷದೊಳಗೆ ಮದುವೆ ಮಾಡಿದರೆ ಕಾನೂನು ಯಾವರೀತಿ ಶಿಕ್ಷೆಯನ್ನು ನೀಡುತ್ತದೆ, ಬಾಲ್ಯವಿವಾಹ ಮಾಡಿದರೆ 1 ವರ್ಷಜೈಲು ಶಿಕ್ಷೆ 2ಲಕ್ಷ ದಂಡವನ್ನು ವಿಧಿಸುತ್ತದೆ ಎಂದು ಮಹಿಳೆಯರಿಗೆ ಮಾಹಿತಿ ತಿಳಿಸಿದರು.
ದಾವಣಗೆರೆಯ ಮಹಾತ್ಮ ಗಾಂಧಿ ರಾಷ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷರಾದ ಆವರಗೆರೆ ಚಂದ್ರು ಮಾತನಾಡಿ, ಸರ್ಕಾರದ ಉತ್ತಮ ಯೋಜನೆಯಾದ ಉದ್ಯೋಗ ಖಾತ್ರಿಯ ಬಗ್ಗೆ ಸಂಪೂರ್ಣ ಮಾಹಿತಿ ನಿಡಿದರು. ಉದ್ಯೋಗ ಖಾತರಿ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಜಾರಿ ಮಾಡಿರುವ ಸವಲತ್ತುಗಳನ್ನು ಕೂಡಲೇ ಜಾಬ್‍ಕಾರ್ಡ್ ಕಾರ್ಮಿಕರಿಗೆ ಜಾರಿಗೆ ತರುವಂತೆ ಸರಕಾರಕ್ಕೆ ಒತ್ತಾಯಿಸಿ, ಉದ್ಯೋಗ ಖಾತರಿ ಕಾರ್ಮಿಕರಿಗೆ ಸವಲತ್ತುಗಳು ದೊರೆಯಲು ಶೀಘ್ರವಾಗಿ ಸ್ಮಾರ್ಟ್‍ಕಾರ್ಡ್ ಕೊಡಿ, ಇಲ್ಲವೇ ಸ್ಮಾರ್ಟ್‍ಕಾರ್ಡ್ ಕೊಡುವುದನ್ನು ಕೈಬಿಟ್ಟು ಉದ್ಯೋಗ ಖಾತರಿ ಕಾರ್ಮಿಕರಿಗೆ ನೇರವಾಗಿ ಕಾರ್ಡ್‍ಕೊಡಿ ಎಂದೂ ಸರಕಾರಕ್ಕೆ ಒತ್ತಾಯಿಸಿದ್ದೇವೆ. ಕಾರ್ಮಿಕರಿಗೆ ಸಿಗುವಂತಹ ಇನ್ನು ಅನೇಕ ಸಾಲಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಯೋಜನಾಧಿಕಾರಿಗಳಾದ ರಾಘವೇಂದ್ರ .ಬಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಮ್ಮ ಕೆಂಚನಹಳ್ಳಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೆ.ಜಿ.ಶೇಖರಪ್ಪ ಕೆಂಚನಹಳ್ಳಿ, ಜಿಲ್ಲಾ ಮಕ್ಕಳ ಸಹಾಯವಾಣಿ ಮೇಲ್ವಿಚಾರಕರಾದ ಜ್ಯೋತಿ ದಾವಣಗೆರೆ, ಉದ್ಯೋಗ ಖಾತರಿ ಜಿಲ್ಲಾ ಉಪಾಧ್ಯಕ್ಷರು ರಂಗನಾಥ ದಾವಣಗೆರೆ ಉಪಸ್ಥಿತರಿದ್ದರು.
ಈ ವೇಳೆ ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ವಲಯದ ಮೇಲ್ವಿಚಾರಕಿ ಪದ್ಮಾವತಿ ಕೊಂಡಜ್ಜಿ, ಸೇವಾ ಪ್ರತಿನಿದಿಗಳುü ಹಾಗೂ ಎಸ್‍ಕೆಡಿಆರ್‍ಡಿಪಿ ಯ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.