ತಿಪಟೂರು
ತಾಲ್ಲೂಕಿನ ಅಯ್ಯನಬಾವಿ ಬಳಿ ಬೈಕ್‍ಗೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿಹೊಡೆದ ಪರಿನಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯಲ್ಲಿ ಅರಸೀಕೆರೆಯಿಂದ ಬರುತ್ತಿದ್ದ ಟಿಪ್ಪರ್‍ಲಾರಿ ಅದೇ ಮಾರ್ಗದಲ್ಲಿ ಬರುತ್ತದಿದ್ದ ಬೈಕ್‍ಗೆ ಅಯ್ಯನಬಾವಿ ಬಳಿ ಹಿಂಬದಿಯಿಂದ ಗುದ್ದಿದ ಪರಿಣಾಮವಾಗಿ ಬೈಕ್ ಸವಾರ ಸಲಪರಹಳ್ಳಿಯ ಪರಮೇಶ್(36) ಸ್ಥಳದಲ್ಲೇ ಮೃತಪಟ್ಟಿದ್ದು ಮೃತನ ಪತ್ನಿ ಮಂಜುಳ (35) ತಲೆಗೆ ತೀರ್ವವಾದ ಪೆಟ್ಟುಬಿದ್ದಿದ್ದು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‍ಗೆ ಕಳುಹಿಸಿರುತ್ತಾರೆ ಮಕ್ಕಳಾದ ಸೌಂದರ್ಯ(5), ಚೇತನ್(3) ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಸಾರ್ವಜನಿಕ ಆಕ್ರೋಶ :
ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟಿಯ ಹೆದ್ದಾರಿ206 ವಿಸ್ತರಣೆಕಾರ್ಯ ನಡೆಯುತ್ತಿದ್ದು ಇದಕ್ಕಾಗಿ ರಸ್ತೆಯ ಅಕ್ಕಪಕ್ಕದ ಮರಗಳನ್ನು ಆಹುತಿತೆಗೆದುಕೊಂಡಿದ್ದು, ಈ ಸುಡುಬಿಸಲಿನಲ್ಲಿ ವಾಹನಸವಾರರು ಅತಿಯಾಗಿ ಬಳಲುವುದರ ಜೊತೆಗೆ ರಸ್ತೆಯಲ್ಲಿ ಗುಂಡಿಗಳು ಸಾವಿನ ಕೂಪಗಳಾಗಿ ಮಾರ್ಪಟ್ಟಿದ್ದು, ಅವುಗಳನ್ನು ತಪ್ಪಿಸಲು ಹೋಗಿ ದಿನನಿತ್ಯ ಅಪಘಾತಗಳು ಹೆಚ್ಚುತ್ತಲಿವೆ, ರಸ್ತೆ ವಿಸ್ತರಣೆಯಾಗುವುದು ಒಳ್ಳೆಯದೇ ಆದರೆ ಈ ಗುಂಡಿಗಳನ್ನು ಮುಚ್ಚಿ ರಸ್ತೆಸವಾರರಿಗೆ ಅನುಕೂಲಮಾಡಿಕೊಡಬೇಕೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
