ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಓರ್ವ ಸಾವು

ಚಿಕ್ಕಜಾಜೂರು;

        ಚಿಕ್ಕಜಾಜೂರು ಸಮೀಪ ಆರ್.ಎಂ.ಸಿ ಗೇಟ್ ಬಳಿ ಲಾರಿ ಬಸ್ ಮುಖಾ ಮುಖಿ ಡಿಕ್ಕಿ ಹೊಡದ ಪರಿಣಾಮ ಓರ್ವ ಸ್ಥಳದಲ್ಲಿ ಸಾವನ್ನಾಪ್ಪಿದ್ದಾನೆ 18 ಜನ ಗಾಯಗೊಂಡಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

        ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಹೊಳಲ್ಕೆರೆಯಿಂದ ದಾವಣಗೆರೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಮತ್ತು ಆನಗೊಡು ಮಾರ್ಗವಾಗ ಪಶುಆಹಾರ ತುಂಬಿಕೊಂಡು ಬರುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬಸ್‍ನಲ್ಲಿದ್ದ ಹೆಚ್.ಡಿ.ಪುರ ಗ್ರಾಮದ ನಾಗಪ್ಪನ ಮಗ ಹೊರಕೇರಪ್ಪ (40) ಇವರು ಸ್ಥಳಲ್ಲಿಯೆ ಮೃತಪಟ್ಟಿದ್ದಾರೆ.

         ಬಸ್ಸಿನಲ್ಲಿ ಸುಮಾರು 35 ಜನರು ಪ್ರಯಾಣಿಸುತ್ತಿದ್ದು ಅದರಲ್ಲಿ 18 ಜನರಿಗೆ ತೀವ್ರ ಗಾಯಗಳಾಗಿದ್ದು ಅವರಲ್ಲಿ ಮೂರು ಜನರಿಗೆ ಕೈಕಾಲು ಮುರಿದದ್ದು ತೀವ್ರ ರೀತಿ ಗಾಯ ಗೊಂಡಿದ್ದಾರೆ. ಇವರನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ತೆಗೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಕೆಲವರನ್ನು ದಾವಣಗೆರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸಗೆ ಕಳಿಸಲಾಯಿತು.

         ಅಪಘಾತದಿಂದ ಎರಡು ಬಾಹನದ ಮುಂಭಾಗ ಸಂಪೂರ್ಣ ಜಕಂ ಗೊಂಡಿದ್ದು ಬಸ್ ಚಾಲಕ ಮಲ್ಲಿಕಾರ್ಜನನಿಗೆ (34) ತೀವ್ರಗಾಯಗಳಾಗಿವೆ, ಲಾರಿ ಚಾಲಕ ಪುಟ್ಟಸ್ವಾಮಿ (35) ಜಕಂ ಗೊಂಡಿದ್ದ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡಿದ್ದನು. ಪೋಲೀಸರು ಸಾರ್ವಜನಕರು ಸುಮಾರು ಒಂದು ಗಂಟೆ ಕಾಲ ಹೊರ ತೆಗೆಯಲು ಪ್ರಯತ್ನಿಸಿದರು ಅಗಲಿಲ್ಲ. ಅನಂತರ ಪೋಲೀಸರು ಜ.ಸಿ.ಪಿ ತರಸಿ ಎರಡು ವಾಹನ ಬೇರ್ಪಡಿಸಿ ಲಾರಿ ಚಾಲಕನ ದೇಹವನ್ನು ಹೊರಗೆ ತೆಗೆದು ದಾವಣಗೆರೆ ಆಸ್ಪತ್ತರಗೆ ಕಳಿಸಲಾಯಿತು.

         ಈ ಅಪಘಾತದಿಂದ ರಸ್ತೆ ಸಂಚಾರ ಬಂದಾಗಿದ್ದು ದಾವಣಗೆರೆ, ಚಿತ್ರದುರ್ಗ ಹೂಸದುರ್ಗ ಮಾರ್ಗದಲ್ಲಿ ಸಂಚರಿಸುವ ಎಲ್ಲ ವಾಹನಗಳು ಸುಮಾರು ಒಂದು ಗಂಟೆ ತಡವಾಗಿ ಸಂಚರಿಸಿದವು.

       ಅಪಘಾತದ ದೃಶ್ಯ ನೂಡಲು ಸಾವಿರಾರು ಜನರು ನೆರದಿದ್ದ ಕಾರಣ ಪೋಲಿಸರು ಅರಸಹಾಸ ಮಾಡಿ ರಕ್ಷಣೆ ಕಾರ್ಯ ಮಾಡಲಾಯಿತು.

ಅಪಘಾತಕ್ಕೆ ಕಾರಣ;-

       ಅಪಘಾತ ನಡೆದ ಸ್ಥಳದ ರಸ್ತೆಯಲ್ಲಿ ಒಂದು ಅಡಿ ಆಳದ ಗುಂಡಿ ಇದ್ದು ಇದರ ಮೇಲೆ ಬಸ್ ಸಂಚರಿಸಿದಾಗ ಬಸ್ ಚಾಲಕನಿಗೆ ಹಿಡಿತ ತಪ್ಪಿದೆ ಇದರಿಂದ ಈ ಘಟನೆ ನಡೆದಿದೆ ಎಂದು ಈ ಸ್ಥಳದಲ್ಲಿದ್ದ ಸಾರ್ವಜನಿಕರು ಸುದ್ದಿ ಗಾರರಿಗೆ ತಿಳಿಸಿದ್ದಾರೆ.

       ಇಂತಹ ಘಟನೆ ಈ ಸ್ಥಳದಲ್ಲಿ ಆಗಾಗ ಆಗುತ್ತದ್ದು ಚಿಕ್ಕ ಪುಟ್ಟ ಘಟನೆ ನಡೆದಿವೆ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ, ಚಿಕ್ಕಜಾಜೂರಿನಿಂದ ದಾವಣಗೆರೆಗೆ ಹೋಗುವಾಗ ಇಂತಹ ಗುಂಡಿಗಳು ಸುಮಾರು 40ರಿಂದ 50 ಸಿಗುತ್ತವೆ ರೈತರು ಹೊಲಕ್ಕೆ ನೀರು ಹಾಯಿಸಲು ರಸ್ತೆಗೆ ಗುಂಡಿ ತೆಗೆಯುತ್ತಾರೆ ನಂತರ ಮುಚುವುದಿಲ್ಲ ಮತ್ತು ಈ ಬಗ್ಗೆ ಇಲಾಖೆ ಗಮನಹರಿಸುವುದಿಲ್ಲಾ ಎಂದು ಸಾರ್ವಜನಿಕರು ಸುದ್ದಿಗಾರರಿಗೆ ತಿಳಿಸಿದರು. ಮತ್ತು ಈ ಬಗ್ಗೆ ತನಿಕೆ ಒತ್ತಾಯಿಸಿದ್ದಾರೆ.

      ಹೊಳಲ್ಕೆರೆ ಪೋಲೀಸ್ ವೃತ್ತ ನಿರೀಕ್ಷಕ ಮಧುಸುಧನ್ ಚಿಕ್ಕಜಾಜೂರು ಪ್ರಭಾರಿ ಪಿ.ಎಸ್ ಐ. ಚಂದ್ರಶೇಖರ್ ಮತ್ತು ಸಿಬ್ಬಂದಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link