ತುರುವೇಕೆರೆ
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹರಿಕಾರನಹಳ್ಳಿ ಗ್ರಾಮದ ಎಚ್.ವಿ.ರಾಜಣ್ಣನವರ ಮಗ ಮಾರುತಿ (25) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಮೃತನಿಗೆ ತಾಯಿ, ತಂದೆ ಮತ್ತು ಒಬ್ಬ ತಮ್ಮನಿದ್ದಾನೆ.
ಮೃತ ಮಾರುತಿ ಎಂಜಿನಿಯರ್ ಆಗಿದ್ದು ಹಲವು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಗುರುವಾರ ರಾತ್ರಿ ಬೆಂಗಳೂರಿನ ಚಂದಾಪುರ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಹೋಗುವಾಗ ಹಿಂಬದಿಯಿಂದ ವಾಹನ ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಮೃತ ಯುವಕ ಮಾರುತಿಯ ಸ್ವಗ್ರಾಮದಲ್ಲಿ ಶುಕ್ರವಾರ ಸಂಜೆ ಶವಸಂಸ್ಕಾರ ಜರುಗಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ