ಮಧುಗಿರಿ
ತಾಲ್ಲೂಕಿನ ಗಡಿ ಗ್ರಾಮ ಚಂದ್ರಬಾವಿಯ ಬಸ್ ನಿಲ್ದಾಣದ ಬಳಿ ಫೆ. 11 ರಂದು ಮಡಕಶಿರಾ ಕಡೆಯಿಂದ ರೊಳ್ಳ ಗ್ರಾಮಕ್ಕೆ ಬರುತ್ತಿದ್ದ ಎ.ಪಿ.ಎಸ್.ಆರ್.ಟಿ.ಎಸ್ ಬಸ್‍ಗೆ ಚಳ್ಳಕೆರೆ ತಾಲ್ಲೂಕಿನ ಪಡಗಲಬಂಡೆ ಗ್ರಾಮದ ಸಿದ್ದಮೂರ್ತಿ ಹಾಗೂ ನರಸಿಂಹ ಎನ್ನುವವರಿಬ್ಬರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವಾಗ ದ್ವಿಚಕ್ರವಾಹನ ತಗುಲಿದ್ದು, ಸಿದ್ದಮೂರ್ತಿ ಸ್ಥಳದಲಿಯೆ ಅಸು ನೀಗಿರುತ್ತಾನೆ. ನರಸಿಂಹನಿಗೆ ಬಲವಾದ ಪೆಟ್ಟು ಬಿದ್ದಿದು, ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.
ಘಟನಾ ಸ್ಥಳಕ್ಕೆ ಮಿಡಿಗೇಶಿ ಪಿ.ಎಸ್.ಐ.ಹನುಮಂತರಾಯಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕಿಡಾದ ಎರಡೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಶವ ಪರೀಕ್ಷೆ ಮಧುಗಿರಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಫೆ.12 ರಂದು ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
