ಮಧುಗಿರಿ :
ಗ್ರಾಮಕ್ಕೆ ಮತ್ತೊಂದು ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗ್ರಾಮದ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ತಡೆದು ಪ್ರತಿಭಟಿಸಿದರು.
ತಾಲ್ಲೂಕಿನ ಪುರವರ ಹೋಬಳಿಯ ಕೋಡ್ಲಾಪುರಕ್ಕೆ ಪ್ರತಿ ನಿತ್ಯ ಒಂದೇ ಬಂದು ಬಸ್ ಸಂಚರಿಸುತ್ತಿದೆ ಆದರೆ ಈ ಬಸ್ ಮಧುಗಿರಿಗೆ ತಲುಪ ಹೊತ್ತಿಗೆ ಶಾಲಾ ಕಾಲೇಜುಗಳ ಆರಂಭವಾಗಿರುತ್ತದೆ ಈ ಸಮಸ್ಯೆಯನ್ನು ಹೋಗಲಾಡಿಸುವಂತೆ ಹಲವು ಬಾರಿ ಜನ ಪತ್ರಿನಿಧಿಗಳಿಗೆ ಹಾಗೂ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಸಹ ನಮ್ಮ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ.
ಗ್ರಾಮಕ್ಕೆ ಶಾಲೆಯ ವೇಳೆಗೆ ಒಂದೇ ಒಂದು ಬಸ್ ಬರುತ್ತಿದೆ ಸುಮಾರು ನೂರಾರು ವಿದ್ಯಾರ್ಥಿಗಳು ಇದೇ ಬಸ್‍ನಲ್ಲಿ ಕೂರಲು ಮತ್ತು ನಿಲ್ಲಲು ಜಾಗವಿಲ್ಲದಿದ್ದರು ಸಹ ಮಳೆ ಗಾಳಿ ಎನ್ನದೆ ಬಾಗಿಲಲ್ಲಿಯೇ ನಿಂತು ಹೋಗ ಬೇಕಾದ ಅನಿವಾರ್ಯತೆ ಇದೆ ಜತೆಗೆ ಶಾಲಾ ಕಾಲೇಜುಗಳಿಗೆ ತಡವಾಗಿ ಹೋಗುತ್ತಿರುವುದರಿಂದ ತರಗತಿಗಳಿಂದ ಕೂಡ ವಂಚಿತರಾಗುತ್ತಿದ್ದೆವೆ ನಮ್ಮನ್ನು ಶಾಲೆಯ ಕೊಠಡಿಯ ಹೊರ ಭಾಗದಲ್ಲಿ ಶಿಕ್ಷಕರು ನಿಲ್ಲಿಸುತ್ತಿದ್ದಾರೆ ಕೆಲ ಸಂದರ್ಭಗಳಲ್ಲಿ ಗ್ರಾಮಕ್ಕೆ ಮತ್ತೆ ಮರಳು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಆಳಲನ್ನು ತೊಡಿಕೊಂಡಿದ್ದಾರೆ.
ನಮ್ಮ ಗ್ರಾಮವು ಮಧುಗಿರಿ ತಾಲ್ಲೂಕಿಗೆ ಹೊಂದಿ ಕೊಂಡಿದೆ ಆದರೆ ಮತ ಕ್ಷೇತ್ರ ಮಾತ್ರ ಕೊರಟಗೆರೆಗೆ ಸೇರ್ಪಡೆಯಾಗಿರುವುದರಿಂದ ನಮ್ಮ ಉಪ ಮುಖ್ಯ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ರವರ ಬಳಿ ನಮ್ಮ ಸಮಸ್ಯೆ ಹೇಳಿಕೊಳ್ಳಲಾಗುತ್ತಿಲ್ಲ ಇನ್ನಾದರು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಹೋಗಲಾಡಿಸ ಬಾಕಾಗಿದೆ ಇಲ್ಲವಾದರೆ ಮತ್ತೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಚಿದಾನಂದ್, ಮೈಲಾರಿ, ಸಂದೀಪ್, ಹೇಮಂತ್, ಆಶ್ವಿನಿ, ಪಲ್ಲವಿ ಶೈಲಜಾ, ಸಿಂಧು, ರಂಜಿತಾ, ಉಪೇಂದ್ರ, ಚಂದ್ರಶೇಖರ್, ಆಶೋಕ್, ಮುರುಳಿಕುಮಾರ್, ಮಾರುತಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
