ತುಮಕೂರು
ತುಮಕೂರು ಜಿಲ್ಲೆಯಲ್ಲಿ ಒಂದು ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆ ಯಾಗಿದೆ ಎಂದು ಡಿ.ಎಹ್.ಒ ಡಾ. ನಾಗೇಂದ್ರಪ್ಪ ಅವರು ತಿಳಿಸಿದ್ದಾರೆ.
ಮಾಗಡಿ ತಾಲ್ಲೂಕಿನ ಕೆಸ್ಸಾರ್ಟಿಸಿ ಡಿಪೋದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ 34ವರ್ಷದ ಬೆಳ್ಳಾವಿ ವ್ಯಾಪ್ತಿಯ ಮಾವಿನಕುಂಟೆ ಗ್ರಾಮದ ನಿವಾಸಿ ಪಿ-2135 ಎಂಬ ವ್ಯಕ್ತಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನಾ ಅವರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದ್ದು. ಮಾವಿನಕುಂಟೆ ಗ್ರಾಮವನ್ನು ಹೊಸ ಕಂಟೈನ್‍ಮೆಂಟ್ ವಲಯವನ್ನಾಗಿ ಪರಿವರ್ತನೆ ಮಾಡಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ದಾಖಲಾಗಿದ್ದ ಪಿ-1686 ಪ್ರಕರಣದ ಮಹಿಳೆಯು ನಿನ್ನೆ ಮೃತಪಟ್ಟಿರುತ್ತಾರೆ. ನೆಲಮಂಗಲದ ವೀರಸಾಗರ ಗ್ರಾಮದ ಈ ಮಹಿಳೆಯು ಉಸಿರಾಟದ ತೊಂದರೆಯಿಂದ ಮೇ19ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು, ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಡಪಟ್ಟಿತ್ತು. ಅವರಿಗೆ 2ದಿನಗಳಿಂದಲೂ ವೆಂಟಿಲೇಟರ್‍ನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು ಅದರೆ ಮೇ 24ರಂದು ರಾತ್ರಿ ಆ ಮಹಿಳೆಯು ಮೃತಪಟ್ಟಿರುತ್ತಾರೆ. ಆ ಮಹಿಳೆಯ ಕುಟುಂಬದ ಸದಸ್ಯರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ. ವೀರಸಾಗರವನ್ನು ಕಂಟೈನ್‍ಮೆಂಟ್ ಜೋನಾಗಿ ಪರಿವರ್ತನೆ ಮಾಡಿ ಸೂಕ್ತ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ