ಚಿರತೆಯ ದಾಳಿಗೆ ಮತ್ತೊಂದು ಬಲಿ 

ಕುಣಿಗಲ್ee

     ರೊಚ್ಚಿಗೆದ್ದ ಗ್ರಾಮಸ್ಥರು ಎರಡನೇ ಬಾರಿಗೆ ಮತ್ತೊಬ್ಬ ವ್ಯಕ್ತಿಯ ಮೇಲೆ ಚಿರತೆ ದಾಳಿಗೆ ಬಲಿಯಾದ ಘಟನೆಯನ್ನು ಖಂಡಿಸಿ ರಾಜ್ಯರಸ್ತೆಯನ್ನು ತಡೆದು ಶವವಿಟ್ಟು ಪ್ರತಿಭಟಿಸಿದ ಘಟನೆಗೆ ಶಾಸಕರು ಸಾಥ್ ನೀಡಿದ ಪರಿಣಾಮ ಗಂಟೆಗಟ್ಟಲೆ ಪ್ರತಿಭಟನೆ ಮುಂದುವರೆದಿದ್ದರಿಂದ ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆಯಿತು.

     ಶುಕ್ರವಾರ ಬೆಳಗ್ಗೆ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ವ್ಯಕ್ತಿ ಆನಂದಯ್ಯ ಎಂದಿನಂತೆ ಹೊಲದಲ್ಲಿ ಕುರಿಮೇಯಿಸಲು ಹೋದಾಗ ಕೆರೆಯ ಸಮೀಪದ ಪೊದೆಯಲ್ಲಿದ್ದ ಚಿರತೆ ಆನಂದಯ್ಯನ ಮೇಲೆರಗಿ ಕುತ್ತಿಗೆ ಭಾಗ ಸೇರಿದಂತೆ ದೇಹವನ್ನೆಲ್ಲಾ ಕಚ್ಚಿ ರಕ್ತವನ್ನು ಹೀರಿದ ಪರಿಣಾಮ ಆನಂದಯ್ಯ (60) ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಗ್ರಾಮಸ್ಥರು ಕೂಡಲೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.

      ಇಂದಿನ ಈ ಘಟನೆಯೂ ಸೇರಿ ಕಳೆದ ಕೆಲ ತಿಂಗಳಿಂದ ಇದೇ ಭಾಗದಲ್ಲಿ ಕಣಕುಪ್ಪೆ ಗ್ರಾಮದ ಮಹಿಳೆಯೊಬ್ಬಳು ಚಿರತೆಯ ದಾಳಿಯಿಂದ ಸಾವನ್ನಪ್ಪಿದ್ದಳು. ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಈ ಘಟನೆಯನ್ನು ಮುಂದಿಟ್ಟುಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕೂಡಲೆ ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಲು ಮೃತರ ಕುಟುಂಬದವರು ಸೇರಿದಂತೆ ನೂರಾರು ಗ್ರಾಮಸ್ಥರು ದೊಡ್ಡಮಳಲವಾಡಿ ಗೇಟ್ ಬಳಿಯ ತುಮಕೂರು–ಕುಣಿಗಲ್ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆದಿದ್ದರಿಂದ ಗಂಟೆಗಟ್ಟಲೆ ಕುಣಿಗಲ್ ಮೈಸೂರು ಮಾರ್ಗದ ತುಮಕೂರು ಕೊರಟಗೆರೆ ಮಾರ್ಗದ ವಾಹನಗಳನ್ನು ತಡೆದಿದ್ದರಿಂದ ಪ್ರಯಾಣಿಕರು ಪರದಾಡಿ ಹಿಡಿಶಾಪಹಾಕಿದ ಸನ್ನಿವೇಶ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link