ಬೆಂಗಳೂರು:
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಏರ್ ಸ್ಟ್ರೈಕ್ ಮಾಡಿದ್ದು ಇದನ್ನ ರಾಜಕೀಯಕ್ಕಾಗಿ ಯಾರೂ ಉಪಯೋಗ ಮಾಡಿಕೊಳ್ಳಬಾರದು.ಒಬ್ಬ ವ್ಯಕ್ತಿ ನಾನು ಮಾಡಿದ್ದೇನೆ ಎಂದು ಕ್ರೆಡಿಟ್ ತಗೊಳ್ಳೋ ಕೆಲಸ ಮಾಡಬಾರದು.ಇಲ್ಲಿ ವೈಯಕ್ತಿಕ ಕ್ರೆಡಿಟ್ ಪ್ರಶ್ನೆ ಇಲ್ಲ. ನಮ್ಮ ದೇಶದ ಸೈನಿಕರು ದಿಟ್ಟವಾಗಿ ಉತ್ತರ ನೀಡಿದ್ದಾರೆ ಎಂಬ ಹೆಮ್ಮೆ ನಮಗಿರಬೇಕು. ಅದನ್ನು ಬಿಟ್ಟು ನಾನೇ ಮಾಡಿಸಿದೆ ನಾನೇ ಮಾಡಿಸಿದೆ ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪುಲ್ವಾಮಾ ದಾಳಿಯ ನಂತರ ಸೇನೆ ಮುಖ್ಯಸ್ಥರು ಏನೇ ನಿರ್ಧಾರ ಕೈಗೊಳ್ಳಲಿ ನಾವು ಬೆಂಬಲಿಸುತ್ತೇವೆ ಎಂದಿದ್ದೇವೆ. ಅದರಂತೆ ಸರ್ವಪಕ್ಷಗಳು ಸೇನೆಯ ಮುಖ್ಯಸ್ಥರ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ. ದೇಶದ ಗಡಿಯಲ್ಲಿ ಮತ್ತು ದೇಶದೊಳಗೆ ಇರುವ ಉಗ್ರ ಚಟುವಟಿಕೆ ನಿಗ್ರಹಕ್ಕೆ ಸೇನೆ ಎಂತಹುದ್ದೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ. ಆದರೆ ಇದನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.ಕೇಂದ್ರ ಸಚಿವ ರಮೇಶ್ ಜಿಗಜಿಣಗಿಗೆ ಯಾವ ಕಾರಣಕ್ಕೆ ಮತ ಹಾಕಬೇಕು? ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
