ಹೂವಿನಹಡಗಲಿ
ತಾಲೂಕಿನ ಈರುಳ್ಳಿ ಬೆಳೆಗಾರರು ಸಂಘಟನೆ ಮಾಡಬೇಕಾಗಿದೆ. ಸಂಘಟನೆಯಿಂದ ಹೋರಾಟಗಳನ್ನು ಮಾಡಬಹುದು ಎಂದು ಎಂ.ಪಿ. ಪ್ರಕಾಶ್ ಸಮಾಜ ಮುಖಿಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಹೇಳಿದರು.
ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸೋಮವಾರ ಈರುಳ್ಳಿ ಬೆಳೆಗಾರರ ಒಕ್ಕೂಟ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಈರುಳ್ಳಿ ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಈಭಾಗದಲ್ಲಿ ಹೆಚ್ಚಾಗಿ ಈರುಳ್ಳಿಯನ್ನು ಬೆಳೆಯುವುದರಿಂದ ಬೆಳೆಯ ಬೆಂಬಲ ಬೆಲೆಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ. ಬೆಂಬಲ ಬೆಲೆಸಿಗದೇ ಪ್ರತಿ ವರ್ಷವೂ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಹೇಳಿದರು.
ಈರುಳ್ಳಿ ಬೆಳೆಯ ಸ್ಟೋರೇಜ್ ಮಾಡುವ ಬಗ್ಗೆ, ಹಾಗೂ ಬೆಂಬಲ ಬೆಲೆಯನ್ನು ನಿಗದಿ ಮಾಡುವ ಬಗ್ಗೆ ಹೋರಾಟ ಮಾಡಲು ರೈತರು ಸಂಘಟನೆಯಾಗಬೇಕಿದೆ ಎಂದು ಹೇಳಿದರು.
ಒಕ್ಕೂಟದ ಸಂಸ್ಥಾಪಕ ಎನ್.ಸಿದ್ದೇಶ ಮಾತನಾಡಿ ಈರುಳ್ಳಿ ಬೆಳೆಗಾರರ ಸಂಘಟನೆಗಾಗಿ ಒಕ್ಕೂಟವನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಂಘಟನೆಯ ಪಧಾದಿಕಾರಿಗಳನ್ನು ಆಯ್ಕೆ ಮಾಡಿ ಈರುಳ್ಳಿ ಬೆಳೆಗಾಗರ ರಾಜ್ಯ ಸಮಾವೇಶವನ್ನು ಮಾಡಲಾಗುತ್ತದೆ. ಎಲ್ಲಾ ರೈತರು ಸಹಕಾರ ನೀಡಬೇಕೆಂದು ಹೇಳಿದರು.
ಉತ್ತಂಗಿ ಶಂಕರ ಮಠದ ಸೋಮಶೇಖರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ರೈತ ಸಂಘದ ಮುಖಂಡ ಬಸವನಗೌಡ, ಈರುಳ್ಳಿ ಬೆಳೆಗಾರರ ತಾಲುಕು ಅಧ್ಯಕ್ಷ ತಿಗರಿ ಮಹೇಶ, ಹರಪನಹಳ್ಳಿ ಅಧ್ಯಕ್ಷ ತಿಪ್ಪೇಶ, ಎಂ. ಚನ್ನಬಸಪ್ಪ, ಎಸ್.ಎಂ.ಕೃಪಾಮೂರ್ತಿ, ಕರಿಗೇರ ಕೊಟ್ರಪ್ಪ, ಹನುಮಂತಪ್ಪ, ಸೋಮಶೇಖರ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
