ಚಿತ್ರದುರ್ಗ:
ಕೋಟೆ ನಾಡುಚಿತ್ರದುರ್ಗದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಸುರಿದಿದೆ.ಬರದಿಂದ ತತ್ತರಿಸಿದ್ದ ಜಿಲ್ಲೆಗೆ, ಜಿಲ್ಲೆಯರೈತರಿಗೆ ಮಳೆ ಸಂತೋಷವನ್ನುಕೊಟ್ಟಿದೆ.ಆದರೆ ಈರುಳ್ಳಿ ಬೆಳೆಗಾರರಿಗೆ ಮಾತ್ರಆತಂಕತಂದಿತ್ತಿದೆ.ರೈತರು ನೂರಾರು ಎಕರೆಗಳಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಪ್ರತಿ ದಿನ ಸುರಿಯುತ್ತಿರುವ ಮಳೆಗೆ ಈರುಳ್ಳಿಗೆ “ಕೊಳೆ ರೋಗ” ತಗುಲಿದೆ. ಹೀಗಾಗಿ ಚಿತ್ರದುರ್ಗದರೈತರುಆತಂಕದ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಕಳೆದ ವರ್ಷ ಈರುಳ್ಳಿ ಬೆಲೆ ಏರಿಕೆಕಂಡಿದ್ದರಿಂದಇಲ್ಲಿನರೈತರು ಭರ್ಜರಿ ಈರುಳ್ಳಿ ಬೆಳೆದಿದ್ದರು.ಉತ್ತಮ ಇಳುವರಿಯಿಂದ ಒಳ್ಳೆಯ ಲಾಭವನ್ನೇ ಗಳಿಸಿದ್ದರು.ಆದರೆ ಈ ಬಾರಿಕೊರೊನಾ ಸೋಂಕಿನಿಂದ ಲಾಕ್‍ಡೌನ್ ಮಾಡಿದ್ದು ಈರುಳ್ಳಿ ದರ ಕುಸಿತವಾಯಿತು.ಈಗ ಮಳೆಯಿಂದಾಗಿ ತೊಂದರೆಪಡುವಂತಾಗಿದೆ.ಸತತ ಬರಗಾಲಕ್ಕೆತುತ್ತಾಗಿತೊಂದರೆಅನುಭವಿಸುತ್ತಿದ್ದರೈತರಿಗೆ ಮಳೆಯೂ ಸಮಸ್ಯೆತಂದೊಡ್ಡಿದೆ.ಈರುಳ್ಳಿ ಬೆಳೆಗೆ ಅಪಾರ ಹಾನಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಲೇ ಇದೆ.ಹೀಗೆ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ.
ಚಿತ್ರದುರ್ಗದಲ್ಲಿ ಬಹುತೇಕ ಈರುಳ್ಳಿ ಬೆಳೆಯುವ ಮಣ್ಣುಕಪ್ಪಾಗಿದ್ದು ನೀರಿನ ಅಂಶ ಹೆಚ್ಚಿರುತ್ತದೆ. ಕಪ್ಪು ಮಣ್ಣಿಗೆ ನೀರಿನಅಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹೆಚ್ಚು.ಹೀಗಾಗಿ ಸತತ ಮಳೆ ಸುರಿದರೆ ಈರುಳ್ಳಿ ಬೆಳೆ ಇಳುವರಿ ಬರದೆರೋಗಕ್ಕೆತುತ್ತಾಗುವ ಸಾಧ್ಯತೆದಟ್ಟವಾಗಿರುತ್ತದೆ.ಅದರಲ್ಲೂ ಈಗ ಜಿಟಿಜಿಟಿ ಮಳೆ ಸುರಿಯುತ್ತಲೇಇರುವುದರಿಂದತೊಂದರೆತಪ್ಪಿದ್ದಲ್ಲ. ಚಿತ್ರದುರ್ಗದರೈತ ಮಹಿಳೆಗೆ ನೀರಾವರಿ ಸೌಲಭ್ಯದಆಶ್ವಾಸನೆಕೊಟ್ಟ ಸಿಎಂ ಈರುಳ್ಳಿಗೆ ಕೊಳೆ ರೋಗ ಕಳೆದ ಬಾರಿ ಮಳೆ ಕೈಕೊಟ್ಟರೂ ನೂರಾರುಎಕರೆ ಈರುಳ್ಳಿ ಬೆಳೆಯುವ ಮೂಲಕ ಇಲ್ಲಿನರೈತರು ಲಾಭ ಗಳಿಸಿದ್ದರು. ಈ ಬಾರಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಕ್‍ಡೌನ್‍ಆದ ಪರಿಣಾಮ ಈರುಳ್ಳಿ ಬೀಜ, ಗೊಬ್ಬರ, ಬಾಡಿಗೆ, ಕೂಲಿಕಾರರ ಬೆಲೆ, ಔಷಧಿಗಳ ದರಗಗನಕ್ಕೆ ಏರಿದೆ.ಈ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದೆ.70% ಬೆಳೆಗೆ ಕೊಳೆ ರೋಗ ಈರುಳ್ಳಿ ಒಳ್ಳೆ ಇಳುವರಿ ಬರುವ ಸಮಯದಲ್ಲಿರೋಗಬಾಧೆ ಆವರಿಸಿದ್ದು, ಈರುಳ್ಳಿ ಚಿಕ್ಕದಿದ್ದಾಗಲೇ ಮುರುಟಿದಂತೆಕಾಣುತ್ತಿವೆ. ಹತ್ತಾರು ಎಕರೆಗಳಲ್ಲಿ ಸಾವಿರಾರು ಪ್ಯಾಕೆಟ್ ಈರುಳ್ಳಿ ಬೆಳೆಯುತ್ತಿದ್ದು, 70% ಈರುಳ್ಳಿ ಕೊಳೆರೋಗಕ್ಕೆ ತುತ್ತಾಗಿದೆ.ಈರುಳ್ಳಿ ಬೆಳೆದು ನಷ್ಟ ಅನುಭವಿಸಿದ ರೈತರಿಗೆರಾಜ್ಯ ಸರ್ಕಾರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕೆಂದುರೈತರು ಕೇಳಿಕೊಂಡಿದ್ದಾರೆ.
ಈರುಳ್ಳಿ ಹೊಲವನ್ನುಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿದರೈತಚಿತ್ರದುರ್ಗಕ್ಕೆಇಂದು ಕೃಷಿ ಸಚಿವರ ಭೇಟಿ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಈರುಳ್ಳಿ ಬೆಳೆ ನಿರೀಕ್ಷೆಯಲ್ಲಿದ್ದರೈತರಿಗೆ ಬರೆ ಎಳೆದಂತಾಗಿದೆ.ಚಿತ್ರದುರ್ಗಜಿಲ್ಲೆಯ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ಪ್ರತಿ ವರ್ಷ ನೂರಾರುಎಕರೆ ಈರುಳ್ಳಿ ಬೆಳೆಯುತ್ತಾರೆ. ಆದರೆ ಪರಿಸ್ಥಿತಿ ಹೀಗಾದರೆ ಮುಂದಿನ ಕಥೆಯೇನು ಎಂಬ ಚಿಂತೆ ಇಲ್ಲಿನ ರೈತರದ್ದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ