ತುಮಕೂರು : ಈರುಳ್ಳಿ ಕಳ್ಳನ ಬಂಧನ..!

ತುಮಕೂರು

    ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಈರುಳ್ಳಿ ಕಳ್ಳರೂ ಸಹ ಹೆಚ್ಚಾಗುತ್ತಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆ, ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈರುಳ್ಳಿ ಕ್ಯಾಂಟರ್ ಚಾಲಕನೊಬ್ಬ ಈರುಳ್ಳಿ ಕದಿಯಲು ನಾಟಕವಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

    ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಕ್ಯಾಂಟರ್ಗೆ 183 ಚೀಲ ಈರುಳ್ಳಿಯನ್ನು ಲೋಡ್ ಮಾಡಿ ಕಳುಹಿಸಲಾಗಿತ್ತು. ಈರುಳ್ಳಿ ಆನಂದಕುಮಾರ್ ಎಂಬುವವರಿಗೆ ಸೇರಿದ್ದಾಗಿತ್ತು. ಚೆನ್ನೈನ ಮೋರ್ ವೆಲ್ ಕಂಪನಿಗೆ ಕೆ.ಜಿ 140ರೂ.ನಂತೆ 183 ಚೀಲ ಈರುಳ್ಳಿಯನ್ನು ಸಾಗಿಸಲಾಗುತ್ತಿತ್ತು.

     ಈ ವೇಳೆ ಕ್ಯಾಂಟರ್ ಚಾಲಕ ಚೇತನ್ ಈರುಳ್ಳಿಯನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ್ದಾನೆ. ಹೀಗಾಗಿ ತುಮಕೂರು ಜಿಲ್ಲೆಯ ಶಿರಾ ತಾಲೂಕು ತಾವರಕೆರೆ ಬಳಿಯ ಯರಗುಂಟೇಶ್ವರ ನಗರದ ಬಳಿ ಕ್ಯಾಂಟರ್ ಪಲ್ಟಿ ಮಾಡಿದ್ದಾರೆ. ಕ್ಯಾಂಟರ್ ಪಲ್ಟಿ ಮಾಡಿ ಆಸ್ಪತ್ರೆಗೆ ದಾಖಲಾಗುವ ನಾಟಕ ಕೂಡ ಆಡಿದ್ದಾನೆ. ಬಳಿಕ ಕ್ಯಾಂಟರ್ ಮಗುಚಿ ಬಿದ್ದಿದೆ. ಈರುಳ್ಳಿಯನ್ನು ಜನರು ಹೊತ್ತೊಯ್ದರು ಎಂದು ಮಾಲೀಕ ಆನಂದ್ಗೆ ಪೋನ್ ಮಾಡಿ ಹೇಳಿದ್ದಾನೆ.

      ಬಳಿಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊಲ್ಲಡಕು ಬಳಿ ಕ್ಯಾಂಟರ್ ಚಾಲಕ ಚೇತನ್ 81 ಚೀಲ ಈರುಳ್ಳಿಯನ್ನು ಮಾರಾಟ ಮಾಡಿದ್ದಾನೆ. ಸುಮಾರು 7 ಲಕ್ಷ ಮೌಲ್ಯದ ಈರುಳ್ಳಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಟರ್ ಮಾಲೀಕ, ಚಾಲಕ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಶಿರಾದ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾವರೆಕೆರೆ ಪೊಲೀಸರು ಕದ್ದ ಈರುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ