ಬೆಂಗಳೂರು
ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಹಾಗೂ ಕೆಲ ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಆನ್‍ಲೈನ್‍ನಲ್ಲಿ ದೂರು ಸಲ್ಲಿಸಲು ಅಂತರ್ಜಾಲ ಆಧರಿತ ಮೊಬೈಲ್ ಆಪ್ ಸಿ-ವಿಜಿಲ್ ಎನ್ನುವ ವಿನೂತನ ವ್ಯವಸ್ಥೆಯನ್ನು ಕೇಂದ್ರ ಚುನಾವಣಾ ಆಯೋಗ ಪರಿಚಯಿಸಲಿದೆ.
ಪ್ರಸಕ್ತ ಚುನಾವಣೆಗಳಲ್ಲಿ ಪ್ರಾಯೋಗಿಕವಾಗಿ ಈ ನೂತನ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದ್ದು, ಚುನಾವಣೆ ಘೋಷಣೆಯಾದ ನಂತರ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಈ ಆಪ್‍ಗೆ ಜನಸಾಮಾನ್ಯರು ಚಿತ್ರಸಹಿತ ದೂರು ನೀಡಲು ಅವಕಾಶವಾಗಲಿದೆ.
ಇದರಿಂದ ಮುಕ್ತ ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ಪ್ರಕ್ರಿಯೆಗಳ ಖಾತರಿಯಾಗಲಿದೆ. ಈ ಆಪ್ ಮೂಲಕ ನಾಗರಿಕರು ಸಲ್ಲಿಸುವ ದೂರುಗಳಿಗೆ ಸಂಬಂಧಪಟ್ಟ ಚುನಾವಣಾಧಿಕಾರಿಗಳು ತಕ್ಷಣ ಸ್ಪಂದಿಸಲಿದ್ದಾರೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವ ಅವಧಿಗೆ ಸೀಮಿತವಾಗಿ ಮಾತ್ರ ಈ ಆಪ್ ಕಾರ್ಯನಿರ್ವಹಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ