ಚಾಲನಾ ಪರವಾನಗಿಗೆ ಮುಕ್ತ ಶಾಲೆ ತೆರೆಯಲು ಆಗ್ರಹ

ಚಿತ್ರದುರ್ಗ:

        ವಾಹನ ಚಾಲಕರು ಲೈಸೆನ್ಸ್ ಪಡೆಯಲು ಕೇಂದ್ರ ಸರ್ಕಾರ ಎಂಟನೆ ತರಗತಿ ಕಡ್ಡಾಯಗೊಳಿಸಿರುವುದರಿಂದ ಜಿಲ್ಲೆಯಲ್ಲಿ ವಾಹನ ಚಾಲಕರುಗಳಿಗೆ ಮುಕ್ತ ಶಾಲೆಯನ್ನು ಆರಂಭಿಸಿ ಅರ್ಹಗೊಳಿಸಿ ಚಾಲನಾ ಪರವಾನಗಿ ಪಡೆಯಲು ಅವಕಾಶ ಮಾಡಿಕೊಡುವಂತೆ ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರ ಗೂಡ್ಸ್ ವಾಹನ ಚಾಲಕರ ಮತ್ತು ಮಾಲೀಕರ ಸಂಘದವರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

           ಮೂರು ಮತ್ತು ನಾಲ್ಕು ಚಕ್ರ ಗೂಡ್ಸ್ ವಾಹನ ಚಾಲಕರುಗಳು ನಾನಾ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಚಿಕ್ಕ ವಯಸ್ಸಿನಲ್ಲಿಯೇ ಕ್ಲೀನರ್ ಕಂಡಕ್ಟರ್‍ಗಳಾಗಿ ಕೆಲಸ ಆರಂಭಿಸಿ ಚಾಲನೆಯನ್ನೇ ಕರಗತ ಮಾಡಿಕೊಂಡು ಹತ್ತಾರು ವರ್ಷಗಳಿಂದಲೂ ಬದುಕು ಸಾಗಿಸುತ್ತಿದ್ದಾರೆ.

     ಅಂತಹ ಚಾಲಕರುಗಳಲ್ಲಿ ಚಾಲನಾ ಪರವಾನಗಿ ಇಲ್ಲದಿರುವುದನ್ನು ಗಮನಿಸಿ ದಾವಣಗೆರೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ಮುಕ್ತ ಶಾಲೆ ಆರಂಭಿಸಿ ದಾವಣಗೆರೆ ಜಿಲ್ಲೆಯಲ್ಲಿ 460 ಚಾಲಕರನ್ನು ಉತ್ತೀರ್ಣಗೊಳಿಸಿದ್ದರಿಂದ ಲೈಸೆನ್ಸ್‍ಗೆ ಅರ್ಹರಾಗಿದ್ದಾರೆ.

      ಅದೇ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಮುಕ್ತ ಶಾಲೆಯನ್ನು ಆರಂಭಿಸಿ ಚಾಲಕರುಗಳಿಗೆ ಚಾಲನಾ ಪರವಾನಗಿ ಪಡೆಯಲು ಅವಕಾಶ ನೀಡಬೇಕೆಂದು ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರ ಗೂಡ್ಸ್ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಪಳನಿಸ್ವಾಮಿ ಡಿ.ಸಿ.ಗೆ ಮನವಿ ಅರ್ಪಿಸಿದರು.ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap