ಮುಕ್ತಿ ಕಾಣದ ಕೊಳವೆಬಾವಿ

ಹರಪನಹಳ್ಳಿ:

       ಪಟ್ಟಣದ ಟೀಚರ್ಸ್ ಕಾಲೋನಿ ಮಹತ್ಮಾ ಗಾಂಧಿ ಕ್ಯಾಂಪ್ ಪ್ರದೇಶದಲ್ಲಿರುವ ನಿರುಪಯುಕ್ತ ಕೊಳವೆಬಾವಿಯೊಂದು ತೆರೆದ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

      ಖಾಸಗಿ ಜಮೀನಿನಲ್ಲಿ ಕಳೆದ ಒಂದು ವರ್ಷದ ಕೊರೆಯಿಸಲಾಗಿದ್ದ ಕೊಳವೆಬಾವಿಗೆ ಮುಕ್ತಿ ಕಾಣಿಸದೇ ಹಾಗೆ ಬಿಡಲಾಗಿದೆ. ಇದರ ಸುಮಾರ 20 ಮೀಟರ್ ಅಂತರದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿವೆ. ನಿರುಪಯುಕ್ತ ಕೊಳವೆಬಾವಿ ಬಯಲು ಪ್ರದೇಶದಲ್ಲಿದ್ದು, ಮಕ್ಕಳು ಇಲ್ಲಿಗೆ ಆಟವಾಡಲು ತೆರಳುತ್ತಾರೆ. ಹೀಗಾಗಿ ಇದು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ.

      ನಿರುಪಯುಕ್ತ ಕೊಳವೆಬಾವಿ ಸುಮಾರು 100 ಅಡಿ ಆಳದಷ್ಟಿದ್ದು, ಇದನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜಮೀನಿನ ಮಾಲೀಕರು ಕೊಳವೆಬಾವಿಗೆ ಮುಕ್ತಿ ಕಾಣಿಸಿ ಅವಘಡಗಳು ಆಗದಂತೆ ಕ್ರಮ ಜರುಗಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link