ಪ್ರತೀ ಹೋಬಳಿಗೊಂದರಂತೆ ಮೇವು ಬ್ಯಾಂಕ್ ಆರಂಭಿಸುವಂತೆ ಸ್ವಾಮೀಜಿ ಮನವಿ

ಶಿರಾ:

     ರಾಜ್ಯದಲ್ಲಿ ಮಳೆ ಇಲ್ಲದೇ ಜನ ಮತ್ತು ಜಾನುವಾರುಗಳು ಮೇವು ಹಾಗೂ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಪ್ರತಿ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ತೆರೆಯುವ ಮೂಲಕ ಜಾನುವಾರುಗಳ ರಕ್ಷಣೆ, ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸುವ

      ನಿಟ್ಟಿನಲ್ಲಿ ಏತ್ತಿನಹೊಳೆ ಮತ್ತು ಭದ್ರ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸುವಂತ ಇಚ್ಚಾಶಕ್ತಿ ಪ್ರದರ್ಶಿಸ ಬೇಕಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸ್ಥಾನ ಮಠದ ಶ್ರೀಹನುಮಂತನಾಥ ಸ್ವಾಮಿಜಿ ಹೇಳಿದರು.

       ಶಿರಾ ತಾಲೂಕಿನ ಕರೇಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಶ್ರೀದುರ್ಗಾಂಬ ಸಮೇತ ಪರಮೇಶ್ವರಸ್ವಾಮಿ ನೂತನ ಸ್ಥಿರ ಬಿಂಬ ಪ್ರತಿಷ್ಟಾಪನಾ ಹಾಗೂ ಶ್ರೀಆಂಜನೇಯ ಸ್ವಾಮಿ ವಿಮಾನ ಗೋಪುರ ಕಳಸ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ದಿವ್ಯಸಾನ್ನಿದ್ಯ ವಹಿಸಿ ಮಾತನಾಡಿದರು.

     ಕುಂಚಿಟಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ನಿರ್ಲಕ್ಷಕ್ಕೆ ಒಳಗಾಗುತ್ತಿದ್ದು, ಪ್ರತಿಭಾವಂತ ವಿಧ್ಯಾರ್ಥಿಗಳಿದ್ದರು ಸಹ ಕೇಂದ್ರ ಸರ್ಕಾರದ ಓಬಿಸಿಯಲ್ಲಿ ಮೀಸಲಾತಿ ಇಲ್ಲದ ಕಾರಣ ಐಎಎಸ್, ಐಪಿಎಸ್‍ನಂತಹ ಉನ್ನತ ಹುದ್ದೆ ಸಾಧ್ಯವಾಗುತ್ತಿಲ್ಲ. ತಕ್ಷಣ ಕೇಂದ್ರ ಸರ್ಕಾರ ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ಕಲ್ಪಿಸ ಬೇಕೆಂದು ಅಗ್ರಹಿಸಿದ ಶ್ರೀಗಳು ವಿಶ್ವವೇ ಒಂದು ಕುಟುಂಬ, ನಾವೇಲ್ಲ ಒಂದೇ ಎಂದು ಧರ್ಮದ ಹಾದಿಯಲ್ಲಿ ಮನುಷ್ಯನ ಯಶಸ್ಸು ಸಾಧ್ಯ.

       ಶುದ್ದ ಮನಸ್ಸಿನಿಂದ ಆರಾಧಿಸುವವನ ಹೃದಯ ಮಂದಿರಲ್ಲಿ ದೇವರು ನೆಲಸುತ್ತಾನೆ. ವಿಧ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರಷ್ಟೆ ಸಾಲದು, ಗುರು ಹಿರಿಯರನ್ನು ಗೌರವಿಸುವಂತ ತಂದೆ ತಾಯಿಗಳನ್ನು ಪ್ರೀತಿಯಿಂದ ಪೋಷಿಸುವಂತ ಸಂಸ್ಕಾರ ಮೈಗೊಡಿಸಿ ಕೊಂಡರೆ ಜೀವನ ಸಾರ್ಥಕತೆ ಕಾಣಲಿದೆ ಎಂದರು.

       ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್ ಗೌಡ, ತಾಪಂ ಸದಸ್ಯ ತಿಮ್ಮಣ್ಣ, ಮಾಜಿ ಜಿಪಂ ಸದಸ್ಯ ಪ್ರಕಾಶ್‍ಗೌಡ, ಬಿ.ಹೆಚ್.ಸತೀಶ್, ವಡ್ಡಗೆರೆ ಪೂಜಾರ್ ಶಿವಕುಮಾರ್, ಪೂಜಾರ್‍ದೊಡ್ಡರಾಜಪ್ಪ, ಹಂದಿಕುಂಟೆ ಗ್ರಾಪಂ ಸದಸ್ಯ ನಾಗರಾಜಪ್ಪ, ಮುಖಂಡರಾದ ಕೆ.ಎನ್.ವೀರಪ್ಪ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಮದ್ದೇವಳ್ಳಿ ರಾಮಕೃಷ್ಣ, ಕರೇಕ್ಯಾತನಹಳ್ಳಿ ಜಗದೀಶ್, ಮಹೇಂದ್ರ, ಪುರುಷೋತ್ತಮ, ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap