ಕೊರೊನಾ ಹತೋಟಿಯ ಬಳಿಕ ಶಾಲೆ ಆರಂಭಿಸಿ

ದಾವಣಗೆರೆ
 
       ಕೊರೊನಾ ಸೋಂಕು ಸಂಪೂರ್ಣವಾಗಿ ಹತೋಟಿಗೆ ಬಂದ ನಂತರದಲ್ಲಿಯೇ ಶಾಲೆಗಳನ್ನು ಆರಂಭಿಸಬೇಕುಎಂದುಜಿಲ್ಲಾ ಪಂಚಾಯತ್ ಸದಸ್ಯ, ರೈತ ಮುಖಂಡತೇಜಸ್ವಿ ಪಟೇಲ್ ಆಗ್ರಹಿಸಿದರು.
     ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲೆ ಪ್ರಾರಂಭಿಸುವ ಕುರಿತು ಆಯೋಜಿಸಿದ್ದ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಅಭಿಪ್ರಾಯ ಸಂಗ್ರಹಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಶಾಲೆಗಳನ್ನು, ಅಧಿಕೃತ ಪಠ್ಯ ಅನ್ವಯ ಕೊರೋನ ಸಂಪೂರ್ಣ ಹತೋಟಿಗೆ ಬಂದ ಮೇಲೆಯೇ ಪ್ರಾರಂಭಿಸಬೇಕು.ಆದರೆ, ಬಹುದಿನಗಳ ಕಾಲ ಮಕ್ಕಳು ಶಾಲೆಯಿಂದ ದೂರ ಉಳಿದರೆ ಪುನಃ ಅವರನ್ನು ಶಾಲಾವಾತಾವರಣಕ್ಕೆ ಹೊಂದಿಸುವುದು ಕಷ್ಟವಾಗುತ್ತದೆ. ಹಾಗಾಗಿ ಶಾಲೆಯ ವಾತಾವರಣ ಮುಂದುವರೆಯಬೇಕು ಮತ್ತು ಕೋವಿಡ್-19 ಸೂಚನೆಯ ಪಾಲನೆಯಾಗಬೇಕು ಎಂದರು.
    ತರಗತಿಯ ತಾರತಮ್ಯವಿಲ್ಲದೆ ಗುಂಪುವಾರು ಮಕ್ಕಳ ಜವಾಬ್ದಾರಿಯನ್ನು ಶಾಲೆಯ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ನೀಡಬೇಕು. ಆಯಾ ಗುಂಪಾಗಲಿ ಶಿಕ್ಷಕರಾಗಲಿ ಪರಸ್ಪರ ಭೇಟಿಯಾಗುವ ಅವಕಾಶವಿರಕೂಡದು .ಗುಂಪುಗಳನ್ನು ಸ್ಥಳೀಯ ಲಭ್ಯತೆಯ ಮೇಲೆ ಆಧಾರದ ಮೇಲೆ ವಿಂಗಡಿಸಿ ಆಯಾ ಪ್ರದೇಶದಲ್ಲಿ ಆ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ಆ ಗುಂಪಿನ ಜವಾಬ್ದಾರಿ ಹೊಂದಿದ ಶಿಕ್ಷಕರಿಗೆ ಸೇರಲ್ಪಡುತ್ತದೆ .ಶಿಕ್ಷಕರಿಗೆ ಪಠ್ಯದ ಹೊಣೆ ನೀಡದೇ ವೈಯುಕ್ತಿಕಕೌಶಲ್ಯ ಮತ್ತು ಆಸಕ್ತಿಗಳ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಮುಕ್ತ ಅವಕಾಶ ನೀಡಬೇಕು ಎಂದು ಹೇಳಿದರು.
    ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ರಮೇಶ್‍ನಾಯ್ಕ್‍ ಕೊರೋನ ವೈರಸ್ ಮಕ್ಕಳಿಗೆ ಬೇಗ ಅಂಟಿ ಕೊಳ್ಳವುದರಿಂದ ಅವರಲ್ಲಿ ದೈಹಿಕ ಅಂತರ ಕಾಪಾಡುವುದು ಕಷ್ಟ. ಆದ್ದರಿಂದ ಇನ್ನೊಂದೆರಡು ತಿಂಗಳುಗಳ ಕಾಲ ಶಾಲೆ ತೆರೆಯುವುದನ್ನು ಮುಂದೂಡುವುದು ಸೂಕ್ತ ಎಂದುಸಲಹೆ ನೀಡಿದರು.
     ಗ್ರಾಮ ಪಂಚಾಯಿತಿ ಸದಸ್ಯ ಟಿ.ಬಿ.ಗಂಗಾಧರ್ ‘ಕೊರೋನ ಸಂಪೂರ್ಣ ಹತೋಟಿಗೆ ಬಂದ ನಂತರ ಶಾಲೆ ತೆರೆಯುವುದು ಸೂಕ್ತ’ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷೆಗೀತ ‘ಶಾಲೆಯನ್ನು ಪ್ರಾರಂಭಿಸಿ ಎರಡುಅಥವಾ ಮೂರು ಪಾಳಿಯಲ್ಲಿ ಶಾಲೆ ನಡೆಸುವುದು ಹೆಚ್ಚು ಸಮಂಜಸ’ಎಂದರು.
 
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap