ಬೆಂಗಳೂರು:
ನಾವು ಆಪರೇಷನ್ ಕಮಲ ಮಾಡುತ್ತೇವೆ.ಕಾಂಗ್ರೆಸ್-ಜೆಡಿಎಸ್ ಶಾಸಕರು ಬಂದರೆ ಕರೆದುಕೊಳ್ಳುತ್ತೇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ್ ಕೆಎಸ್ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಯಚೂರಿಗೆ ಬರ ವೀಕ್ಷಣೆಗೆಂದು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಸತೀಶ್ ಜಾರಕಿಹೊಳಿ ಸರ್ಕಾರದ ಬಗ್ಗೆ ಅಸಮಾಧಾನ ಇದೆ ಎಂದಿದ್ದು,ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಸಚಿವ ಸಂಪುಟದವರೆಗೂ ಸರ್ಕಾರ ಇದ್ದರೆ ಸಂಪುಟ ವಿಸ್ತರಣೆ ಆಗುತ್ತದೆ.ಹಾಗಾಗಿ ಸಂಪುಟ ವಿಸ್ತರಣೆ ಆದ ತಕ್ಷಣ ಸರ್ಕಾರ ಖಚಿತವಾಗಿ ಪತನವಾಗಲಿದೆ ಎಂದರು.
ಬಿಜೆಪಿ ಯಾವುದೇ ಆಪರೇಷನ್ ಮಾಡುತ್ತಿಲ್ಲ.ಅವರ ಶಾಸಕರೇ ಬರುತ್ತಿದ್ದಾರೆ.ಅದಕ್ಕೆ ಆಪರೇಷನ್ ಕಮಲ ಎನ್ನುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಂಡು ಬಂದರೆ ಅವರನ್ನೂ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಬಗ್ಗೆ ಕಾಂಗ್ರೆಸ್‍ನವರು ಏನಾದರೂ ಹೇಳಿಕೊಳ್ಳಲಿ,ಆದರೆ ಬಿಜೆಪಿ ಬೆಳೆಯುತ್ತಿದ್ದು,ಕಾಂಗ್ರೆಸ್ ನಿರ್ನಾಮ ಆಗುತ್ತಿದೆ ಎಂದರು.ಇನ್ನು ಸಿದ್ದರಾಮಯ್ಯ ಇನ್ನೂ ಕನಸಿನಲ್ಲಿ ನಾನು ಮಂಖ್ಯಮಂತ್ರಿ ಎಂದು ಕೊಳ್ಳುತ್ತಿದ್ದಾರೆಂದ ಅವರು,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ